ಬಂಜಗೆರೆ ಜಯಪ್ರಕಾಶ್ ಅವರು ‘ಕುವೆಂಪು ಮೂಲ ಜೈನ, ಭೈರಪ್ಪ ವೈದಿಕ ಬ್ರಾಹ್ಮಣರಲ್ಲ’ ಎಂದು ಪ್ರತಿಪಾದಿಸಿದ್ದಾರೆ. ಜೊತೆಗೆ ಪಂಪನ ಜಾತಿಯ ಬಗ್ಗೆಯೂ ಹೇಳಿದ್ದಾರೆ.
ಇಂಥ ಹೇಳಿಕೆಗಳನ್ನು ನೀಡುವ ಮೂಲಕ ಜಾತಿಭಾವನೆಗಳನ್ನು ಜಾಗೃತಗೊಳಿಸಿದ್ದಾರಷ್ಟೇ ಹೊರತು ಮತ್ತೇನಿಲ್ಲ. ಹೌದು, ಈಗ ಈ ಜಾತಿಯಿಂದ ಆಗಬೇಕಾದುದೇನು ಎಂಬುದು ಅರ್ಥವಾಗಲಿಲ್ಲ. ಅಷ್ಟಕ್ಕೂ ಅವರ ಕೃತಿಗಳನ್ನು ಜಾತಿಯ ಮುಖಾಂತರ ಓದುತ್ತ ಬಂದಿದ್ದೇವೆಯೇ? ಹಾಗೆ ನೋಡಿದರೆ ಪಂಪ, ಕುವೆಂಪು ಜಾತಿಯಿಂದ ಬಹುದೂರವಿದ್ದರು. ಭೈರಪ್ಪನವರೂ ಇದಕ್ಕೆ ಹೊರತೇನಲ್ಲ. ಹೀಗಿದ್ದೂ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ, ಜನರ ಮನಸ್ಸನ್ನು ವಿಚಲಿತಗೊಳಿಸುವುದು ಎಷ್ಟು ಸರಿ?
–ಶಂಕರೇಗೌಡ ತುಂಬಕೆರೆ, ಮಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.