ADVERTISEMENT

ವಾಚಕರ ವಾಣಿ: ನೆನಪಾಗುತ್ತಿದೆ ಉಪ್ಪಿನ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 19:30 IST
Last Updated 6 ಜೂನ್ 2022, 19:30 IST

ಮನೆವಾರ್ತೆಗೆ ಸಂಬಂಧಿಸಿದ ಎಲ್ಲವನ್ನೂ ನನ್ನ ಮಡದಿಯೇ ನೋಡಿಕೊಳ್ಳುವುದು ವಾಡಿಕೆ. ಮೊನ್ನೆ ಆಕೆಯ ಜೊತೆಗೆ ದಿನಸಿ ಅಂಗಡಿಗೆ ಹೋಗಿ ಬೇಕಾದ ಪದಾರ್ಥಗಳನ್ನು ಕೊಂಡು ತಂದಿದ್ಥೆ. ಅವುಗಳ ಬೆಲೆಯ ಕುರಿತು ತಲೆಗೆ ಹಾಕಿಕೊಳ್ಳದ ನಾನು, ಅಂದು ಕುತೂಹಲಕ್ಕೆ ಕೆಲವು ಪ್ಯಾಕೆಟ್‌ಗಳ ಮೇಲೆ ಕಣ್ಣಾಡಿಸಿದೆ. ಆಗ ಉಪ್ಪಿನ ಪ್ಯಾಕೆಟ್‌ ನೋಡಿ ಒಂದು ಕ್ಷಣ ಅವಾಕ್ಕಾದೆ. ಅದರ ಬೆಲೆ ಕೆ.ಜಿ.ಗೆ ₹ 25 ಎಲ್ಲ ತೆರಿಗೆಗಳೂ ಸೇರಿ ಎಂದಿತ್ತು.

ಅಂದಿನ ಬ್ರಿಟಿಷ್ ಕಂಪನಿ ಸರ್ಕಾರ ಉಪ್ಪಿನ ಮೇಲೆ ತೆರಿಗೆ ಹಾಕಿತೆಂದೇ ಮಹಾತ್ಮ ಗಾಂಧಿ ಅವರು ಉಪ್ಪಿನ ಸತ್ಯಾಗ್ರಹ ಮಾಡಿದ್ದು ನೆನಪಾಯಿತು. ಹೆಚ್ಚೆಂದರೆ ಒಂದು ಕುಟುಂಬ ತಿಂಗಳಿಗೆ ಒಂದು ಕೆ.ಜಿ. ಉಪ್ಪು ಬಳಸಬಹುದು. ಅದರ ಮೇಲೂ ತೆರಿಗೆ ವಿಧಿಸಬೇಕೆ? ಇದು ರಾಷ್ಟ್ರಪಿತನಿಗೆ ಮಾಡಿದ ಅಪಮಾನವೇ ಹೌದು. ಕೂಡಲೇ ಉಪ್ಪಿನ ಮೇಲೆ ವಿಧಿಸಿರುವ ತೆರಿಗೆ ಹಿಂಪಡೆಯಲಿ.

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT