ಆಶ್ರಯ ಮನೆ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮಸಭೆಗೆ ಇರುವ ಅಧಿಕಾರ ಮೊಟಕುಗೊಳಿಸಲು ಸರ್ಕಾರ ನಿರ್ಧರಿಸಿರುವುದಾಗಿ ವರದಿಯಾಗಿದೆ (ಪ್ರ.ವಾ., ಡಿ. 12).ಗ್ರಾಮೀಣ ಭಾಗದಲ್ಲಿ ಪ್ರಭಾವಿ ವ್ಯಕ್ತಿಗಳ ಒತ್ತಾಯಕ್ಕೆ ಮಣಿದೋ ಆಮಿಷಗಳಿಗೆ ಒಳಗಾಗಿಯೋ ಅಥವಾ ತಮ್ಮ ಸುತ್ತಲೂ ಸೃಷ್ಟಿಯಾಗುವ ಉಸಿರುಕಟ್ಟುವ ವಾತಾವರಣದಿಂದಲೋ ಎಷ್ಟೋ ಗ್ರಾಮಸಭೆಗಳು ಮೂಲ ಆಶಯಗಳಿಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ಅದನ್ನು ಸರಿಪಡಿಸುವ ಜವಾಬ್ದಾರಿ ಸರ್ಕಾರಕ್ಕೆ ಇದೆ. ಹಾಗಂತ, ಅಧಿಕಾರವನ್ನೇ ಮೊಟಕು ಮಾಡುವುದು ಸರಿಯಲ್ಲ.
ಫಲಾನುಭವಿಗಳ ಪಟ್ಟಿಗೆ ಶಾಸಕರು, ಜಿಲ್ಲಾಧಿಕಾರಿ ಮುಂತಾದವರನ್ನು ಒಳಗೊಂಡ ಸಮಿತಿಯ ಒಪ್ಪಿಗೆ ಕಡ್ಡಾಯವಾಗಲಿರುವುದರಿಂದ, ಈ ಸಮಿತಿ ತನ್ನ ಉದ್ದೇಶಕ್ಕೆ ಪೂರಕವಾಗಿ ಸಾಮಾಜಿಕ ಬದ್ಧತೆಯನ್ನು ಮೈಗೂಡಿಸಿಕೊಂಡರೆ ಯೋಜನೆಗೆ ಅರ್ಥ ಬರುತ್ತದೆ. ಇಲ್ಲವಾದರೆ ಕೋಟೆ ಕಾಯಲು ಮತ್ಯಾರನ್ನೋ ನೇಮಿಸಿದಂತೆ ಆಗುತ್ತದೆ.ಅಶ್ವತ್ಥ ಕಲ್ಲೇದೇವರಹಳ್ಳಿ, ಕಡೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.