ಕಲಾವಿದರಾಗಿ ಅನುಪಮ್ ಖೇರ್, ಪಲ್ಲವಿ ಜೋಷಿ ಅವರ ಬಗೆಗೆ ಮೆಚ್ಚುಗೆ ಇರುವವರಿಗೂ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ನೋಡಿದಾಗ ಸಂಶಯ ಉದ್ಭವವಾಗುತ್ತದೆ. ವಲ್ಗರ್ ಎಂಬುದನ್ನು ಕನ್ನಡದಲ್ಲಿ ಅಸಭ್ಯ ಎನ್ನುವುದು ಸರಳೀಕರಿಸಿದಂತೆ. ಪ್ರಾಪಗ್ಯಾಂಡಿಸ್ಟ್, ಮ್ಯಾನಿಪ್ಯುಲೆಟಿವ್ ಪದಗಳಿಗೂ ವ್ಯಾಪಕ ಅರ್ಥಗಳಿವೆ. ಲಪಿಡ್ ತಮ್ಮ ಅಭಿಪ್ರಾಯಗಳಿಂದ ಹಿಂದೆ ಸರಿದಿಲ್ಲ, ಆದರೆ ‘ಕಾಶ್ಮೀರ ಸಮಸ್ಯೆಯ ಬಗೆಗೆ ಹೇಳಿಲ್ಲ, ಅದರ ವಿವರ ತಿಳಿಯಲು ನನಗೆ ಸಾಧ್ಯವಿಲ್ಲ. ವಾಸ್ತವ ಸಂಗತಿಗಳನ್ನು ನಿರಾಕರಿಸುವುದಿಲ್ಲ, ಆದರೆ ಪ್ರಚಾರಕ್ಕೆ ಸಿನಿಮಾದ ವೇಷ ಹಾಕಿ ತರುವುದನ್ನು ಗುರುತಿಸಬಲ್ಲೆ’ ಎಂದಿರುವುದು ಗಮನಾರ್ಹ.
ಆಳುವ ಪಕ್ಷದ ಕಾಶ್ಮೀರ್ ಪ್ರಾಜೆಕ್ಟ್ ಜಾರಿಯಲ್ಲಿದೆ. ಆ ರಾಜ್ಯವನ್ನು ವಿಭಜಿಸಿದ ರೀತಿ ಮರ್ಯಾದಾರಹಿತವಾಗಿತ್ತು. ಚಿತ್ರದ ಅಂತಿಮ ಭಾಗದಲ್ಲಿ ‘ಹೊಸ ಯುಗದ ಆರಂಭ’ ಭಾಷಣದ ತುಣುಕಿದೆ. ಆರಂಭ ಹಾಗೂ ಅಂತ್ಯದ ದೃಶ್ಯಗಳ ಪೇರಿಸುವಿಕೆ ಯೋಜನಾಬದ್ಧವಾಗಿದೆ. ಕಾಶ್ಮೀರ ಪಂಡಿತರ ಸಮಸ್ಯೆಗಳ ಬಗೆಗೆ ನೈಜ ಕಾಳಜಿ ಇರುವವರಿಗೂ ಕಸಿವಿಸಿ ಆಗುತ್ತದೆ. ಕ್ರೂಡ್ ಆ್ಯಂಡ್ ವಯೊಲೆಂಟ್ ಎಂದು ಲಪಿಡ್ ಹೇಳಿರುವುದು ತಪ್ಪಲ್ಲ.
- ಎಚ್.ಎಸ್.ಮಂಜುನಾಥ,ಗೌರಿಬಿದನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.