ADVERTISEMENT

ವಾಚಕರ ವಾಣಿ| ಹೌದು, ದನ ಕಾಯ್ತಾ ಇದ್ದೀವಿ...!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 7 ಸೆಪ್ಟೆಂಬರ್ 2022, 19:31 IST
Last Updated 7 ಸೆಪ್ಟೆಂಬರ್ 2022, 19:31 IST

ಗೋವುಗಳನ್ನು ದತ್ತು ಪಡೆದು, ಪುಣ್ಯಕೋಟಿ ಯೋಜನೆ ಬೆಂಬಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರಿ ನೌಕರರಿಗೆ ಕರೆ ನೀಡಿದ್ದಾರೆ (ಪ್ರ.ವಾ., ಸೆ. 7). ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ಬಂದ ಮೇಲೆ, ರೈತರು ಮುದಿ ಹಸುಗಳನ್ನು ಮಾರಲಾಗದೆ, ಸಾಕಲೂ ಆಗದೆ ಗೋಶಾಲೆಗಳು ದೊಡ್ಡದಾಗಿವೆ. ಗೋವುಗಳನ್ನು ದತ್ತು ಪಡೆದು ನಗದು ರೂಪದಲ್ಲಿ ಹಣ ಕೊಟ್ಟರೂ ಅವುಗಳ ಹೊಟ್ಟೆ ತುಂಬುವ ಖಾತರಿಯಿಲ್ಲ. ಅದಕ್ಕೆ ಬದಲಾಗಿ, ಮುಖ್ಯಮಂತ್ರಿ ಕರೆಯನ್ನು ಸ್ವಲ್ಪ ಬದಲಾವಣೆ ಮಾಡಿ, ಒಬ್ಬೊಬ್ಬ ನೌಕರರಿಗೂ ಒಂದೊಂದು ಗೋವು ಹಿಡಿದುಕೊಡುವುದೇ ಸೂಕ್ತವಾಗಿದೆ. ಕಚೇರಿಗಳ ಮುಂದೆ ಕಟ್ಟಿ ಸಾಕಬಹುದು. ಖಾಲಿ ಕುರ್ಚಿಗಳನ್ನು ತೋರಿಸಿ ‘ಕಾಫಿಗೆ ಹೋಗಿದ್ದಾರೆ’ ಎಂದು ಹೇಳುವ ಬದಲು, ‘ಹುಲ್ಲು ಹಾಕಲು, ನೀರಿಡಲು ಹೋಗಿದ್ದಾರೆ’ ಎಂದು ಧ್ವನಿ ಬದಲಿಸಬಹುದು.

ಕಚೇರಿಗೆ ಬರುವ ಕೆಲವು ರಾಜಕಾರಣಿಗಳು ‘ಏನ್ ಮಾಡ್ತಾ ಇದ್ದೀರಿ? ಎಲ್ಲಾ ಸೇರಿಕೊಂಡು ದನ ಕಾಯ್ತೀರಾ’ ಎಂದು ಏರು ಮಾತಿನಲ್ಲಿ ಪ್ರಶ್ನೆ ಮಾಡಿದಾಗ ‘ಹೌದು’ ಅಂತ ಸಮರ್ಥಿಸಲೂ ಬಹುದು. ಕಚೇರಿಗಳಿಗೆ ವರ್ಷಗಟ್ಟಲೆ ಬರಿಗೈಯಲ್ಲೇ ಅಲೆದಾಡುವ ರೈತರು, ಒಂದು ಹಿಡಿ ಹುಲ್ಲನ್ನಾದರೂ ತರುವ ಪರಿಪಾಟ ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ!

- ತಾ.ಸಿ.ತಿಮ್ಮಯ್ಯ,ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.