ಮಹಿಳಾ ಪ್ರಾತಿನಿಧ್ಯ ಮಸೂದೆಯ ಬಗ್ಗೆ ಉಲ್ಲೇಖಿಸುತ್ತಾ ಸವಿತಾ ನಾಗಭೂಷಣ ಅವರು ‘ಕಾಂಗ್ರೆಸ್ ಪಕ್ಷವು ಮೋದಿ ನೇತೃತ್ವದ ಸರ್ಕಾರಕ್ಕೆ ಮುನ್ನ ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದೂ ಈ ಮಸೂದೆ ಸಂಬಂಧವಾಗಿ ಎಂತಹ ಪ್ರಯತ್ನ ಮಾಡಿತು ಎಂಬುದನ್ನು ನೆನೆದಾಗ ಅವರ (ರಾಹುಲ್) ಮಾತನ್ನು ಯಾರೂ ಗಂಭೀರವಾಗಿ ಸ್ವೀಕರಿಸಲಾರರು ಎಂದೇ ಹೇಳಬೇಕು’ ಎನ್ನುತ್ತಾರೆ (ವಾ.ವಾ., ಮಾರ್ಚ್ 11).
ಇಲ್ಲಿ ಎರಡು ವಿಷಯ ಗಮನಿಸಬೇಕು. ಎರಡು ಅವಧಿಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರ
ದಲ್ಲಿದ್ದರೂ ಅದು ಇದ್ದುದು ಮಿತ್ರ ಪಕ್ಷಗಳನ್ನು ಅವಲಂಬಿಸಿಕೊಂಡು. ಈ ಎರಡು ಅವಧಿಗಳಲ್ಲೂ ಅವರಿಗೆ ಸರಳ ಬಹುಮತದ ಹತ್ತಿರಕ್ಕೂ ಬರಲಾಗಿರಲಿಲ್ಲ. ಆದರೆ 2014ರಲ್ಲಿ ಎನ್‌ಡಿಎ ಅಲ್ಲದೆ ಬಿಜೆಪಿಯೊಂದಕ್ಕೇ ಲೋಕಸಭೆಯಲ್ಲಿ ಬಹುಮತಕ್ಕೆ ಅಗತ್ಯ ಇರುವು
ದಕ್ಕಿಂತಲೂ ಹೆಚ್ಚು ಸ್ಥಾನಗಳು ಸಿಕ್ಕಿದ್ದವು. ಇಂತಹ ಸಂದರ್ಭದಲ್ಲಿ, ಕಾಂಗ್ರೆಸ್‌ನ ಸಂಪೂರ್ಣ ಬೆಂಬಲವಿದ್ದೂ ಮಹಿಳಾ ಪ್ರಾತಿನಿಧ‍್ಯ ಮಸೂದೆ ಪಾಸು ಮಾಡಲು ಬಿಜೆಪಿಯು ಒಂದು ಸಣ್ಣ ಯತ್ನವನ್ನೂ ಮಾಡದ್ದನ್ನು ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರದೊಂದಿಗೆ ಹೇಗೆ ಹೋಲಿಸೋಣ?!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.