ರಾಜಕೀಯ ಮುಖಂಡರು ಈಗ ವಿರೋಧಿಗಳನ್ನು ಮನಸೋಇಚ್ಛೆ ಲೇವಡಿ ಮಾಡುವುದು, ಮರ್ಯಾದೆ ಮೀರಿದ ಪದಗಳನ್ನು ಪ್ರಯೋಗಿಸುವುದು, ವೈಯಕ್ತಿಕವಾಗಿ ಟೀಕಿಸುವುದು ಸಾಮಾನ್ಯವಾಗಿದೆ. ಅವರ ಮಾತಿನ ಉದ್ದೇಶಿತ ಅರ್ಥವೇ ಒಂದಿದ್ದರೆ ಜನರಿಗೆ ತಲುಪುವುದು ಮತ್ತೊಂದು ರೀತಿ. ಇಂತಹ ವಿಷಮಯ ವಾತಾವರಣದಲ್ಲಿ ಹಿತವಾಗಿ ಮಾತನಾಡುವವರೂ ಇದ್ದಾರೆ.
ಎದುರಾಳಿಯನ್ನು ತಮ್ಮ ಅಭಿಮಾನಿಗಳು ನಿಂದಿಸಿದರೆ ‘ನಿಂದಿಸಬೇಡಿ, ಅವರ ತಾಯಿಗೆ ನೋವಾಗುತ್ತದೆ. ಅವರೂ ನನ್ನ ಮಗನಿದ್ದಂತೆ’ ಎಂದು ತಡೆಯುವ ಸುಮಲತಾ ಅವರಂತಹ ರಾಜಕೀಯ ವ್ಯಕ್ತಿಗಳೂ ಇದ್ದಾರೆ ಎಂದರೆ ನಂಬಲು ಆಗುವುದಿಲ್ಲ. ರಾಜಕೀಯಕ್ಕೆ ಹೊಸಬರಾದರೂ ಗಂಡನ ಜೊತೆ ಜೊತೆಗೇ ಇದ್ದು ಅಂಬರೀಷ್ ಅವರ ದೊಡ್ಡಸ್ತಿಕೆಯನ್ನು ಮೈಗೂಡಿಸಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆಯ ಯೋಧರೊಬ್ಬರು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದಾಗ ರಾಜಕೀಯ ಮುಖಂಡರು ಭಾಷ್ಪಾಂಜಲಿ ಅರ್ಪಿಸಿದರೆ, ಸುಮಲತಾ ಒಂದಿಷ್ಟು ಸ್ಥಳವನ್ನೇ ಆ ಕುಟುಂಬಕ್ಕೆ ಕೊಟ್ಟು ಔದಾರ್ಯ ತೋರಿದರು. ಸುಸಂಸ್ಕೃತ ನಡೆ–ನುಡಿಯಿಂದ ಅವರು ತೋರಿಸುತ್ತಿರುವ ಹೃದಯವಂತಿಕೆ ಅಚ್ಚರಿ ಮೂಡಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.