ಬೆಳಗಾವಿಯ ಸುವರ್ಣಸೌಧದ ಮುಂದೆ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದ ಕಾಲದಲ್ಲಿ ಪ್ರತಿಭಟನಕಾರರ ಆಕ್ರೋಶದ ಮಾತು ಮತ್ತು ವರ್ತನೆಗಳಿಗೆ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿದ ರೀತಿ ವಿವಾದವನ್ನೇ ಸೃಷ್ಟಿಸಿದೆ. ‘ಕಬ್ಬಿನ ನಾಲ್ಕು ವರ್ಷಗಳ ಹಿಂದಿನ ಬಾಕಿ ಹಣದ ಸಲುವಾಗಿ ಐದು ತಿಂಗಳ ಹಿಂದೆ ಬಂದ ನನ್ನನ್ನು ಗುರಿ ಮಾಡಿದ್ದು ತಪ್ಪು’ ಎಂದು ಮುಖ್ಯಮಂತ್ರಿ ವಾದಿಸುತ್ತಾರೆ.
ಯಾರು ಮುಖ್ಯಮಂತ್ರಿ ಸ್ಥಾನದಲ್ಲಿ ಇರುತ್ತಾರೋ ಅವರನ್ನೇ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸುವುದು ಪ್ರಜಾ ರಾಜ್ಯದಲ್ಲಿ ಸರಿಯಾದ ಮಾರ್ಗ. ಇಲ್ಲಿ ರಾಜಕೀಯ ಪಕ್ಷಗಳ ಪ್ರಸ್ತಾಪ ಅಪ್ರಸ್ತುತ.
ಆಡಳಿತಾರೂಢ ಪಕ್ಷಕ್ಕೆ ಮತ ಹಾಕದ ಮತದಾರನಿಗೂ ಸರ್ಕಾರವನ್ನು ಪ್ರಶ್ನಿಸುವ ಹಕ್ಕಿದೆ. ಈ ಸರಳ ವಿಚಾರ ನಮ್ಮ ಮುಖ್ಯಮಂತ್ರಿಗೆ ಏಕೆ ಅರ್ಥವಾಗುವುದಿಲ್ಲ? ಅವರ ಮನಸ್ಸು ಅಷ್ಟೊಂದು ಸಂಕುಚಿತವಾಯಿತೇ?
ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆಗಳು ಮುನ್ನೆಲೆಗೆ ಬಂದಾಗಲೆಲ್ಲ ಪದೇ ಪದೇ ಮುಖ್ಯಮಂತ್ರಿ ಇದೇ ಪ್ರಶ್ನೆ ಕೇಳುತ್ತಾರೆ. ಇದು ಪ‍್ರಜಾರಾಜ್ಯದಲ್ಲಿ ಆರೋಗ್ಯಕರಬೆಳವಣಿಗೆಯಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.