ಭಾರತ ಕ್ರಿಕೆಟ್ ತಂಡ ಕೈಗೊಳ್ಳಲಿರುವ ಶ್ರೀಲಂಕಾ ಪ್ರವಾಸದಲ್ಲಿ ರಾಹುಲ್ ದ್ರಾವಿಡ್ ಅವರು ಟೀಂ ಇಂಡಿಯಾ ಕೋಚ್ ಆಗಿ ತೆರಳುವ ಸಾಧ್ಯತೆ ಇರುವುದು ಸಂತಸದ ಸಂಗತಿ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಾಲ್ ಎಂದೇ ಖ್ಯಾತರಾಗಿರುವ ದ್ರಾವಿಡ್, ಭಾರತೀಯ ಕ್ರಿಕೆಟ್ ಕಂಡ ಕೆಲವೇ ಅಪರೂಪದ ಆಟಗಾರರಲ್ಲಿ ಒಬ್ಬರು. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ನಂತರ ಭಾರತೀಯ ಆಟಗಾರರಲ್ಲಿ ಪ್ರಮುಖ ಸ್ಥಾನ ಪಡೆದಿರುವ ದ್ರಾವಿಡ್, ಭಾರತೀಯ ತಂಡಕ್ಕೆ ಕೋಚ್ ಆಗಿ ನೇಮಕಗೊಳ್ಳುವುದು ಅವರ ಪ್ರತಿಭೆಗೆ ಸಂದ ಗೌರವವೇ ಸರಿ.
ರಾಜ್ಯ ರಾಜಧಾನಿ ಬೆಂಗಳೂರಿನಿಂದ ರಾಷ್ಟ್ರ ರಾಜಧಾನಿ ದೆಹಲಿವರೆಗೆ ದ್ರಾವಿಡ್ ಪಯಣ ಸುಲಭವಾದುದೇನಲ್ಲ. ತಮ್ಮ ತಪಸ್ಸಿನಂತಹ ಕ್ರಿಕೆಟ್ ಆರಾಧನೆಯಿಂದ ಯಶೋಗಾಥೆಗೆ ಕಾರಣರಾದ ದ್ರಾವಿಡ್ ತಮ್ಮನ್ನು ಮತ್ತೊಂದು ಮೈಲಿಗಲ್ಲಿಗೆ ಒಡ್ಡಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಅಭಿನಂದನೆಗಳು.
-ಶ್ರೀಧರ್ ಡಿ. ರಾಮಚಂದ್ರಪ್ಪ, ತುರುವನೂರು, ಚಿತ್ರದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.