ADVERTISEMENT

ವಾಚಕರವಾಣಿ: ಸಿಹಿಗಿಂತ ಹೆಚ್ಚಾಯ್ತು ಕಹಿಯ ಅನುಭವ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 19:30 IST
Last Updated 10 ನವೆಂಬರ್ 2021, 19:30 IST

ಹೆಚ್ಚಿನ ಹೋಟೆಲ್‌ಗಳಲ್ಲಿ ಕಾಫಿ, ಟೀ ಹಾಗೂ ವಿವಿಧ ತಿಂಡಿಗಳ ಬೆಲೆ ಕ್ರಮವಾಗಿ ₹ 2, ₹ 5ರಷ್ಟು ಏರಿಕೆಯಾಗಿದೆ. ಇದು ಹೋಟೆಲ್‌ನವರಿಗೆ ಅನಿವಾರ್ಯ ಕ್ರಮ ಆಗಿರಬಹುದು. ಅವರು ತಾನೇ ಏನು ಮಾಡಿಯಾರು? ಗ್ಯಾಸ್, ಪೆಟ್ರೋಲ್, ಡೀಸೆಲ್ ಇನ್ನಿತರ ವಸ್ತುಗಳ ದರ ಏರಿಕೆಯಾಗುತ್ತಲೇ ಇದೆ. ಆದರೆ, ಗ್ರಾಹಕರ ಬವಣೆಯೂ ಅದೇ ರೀತಿ ಇದೆ. ಕೋವಿಡ್‌ ಕಾರಣದಿಂದ ಅನೇಕರಿಗೆ ಸಂಬಳ ಕಡಿತ ಆಗಿದೆ. ಕೆಲವರು ಕೆಲಸವನ್ನೇ ಕಳೆದುಕೊಂಡಿದ್ದಾರೆ. ಕೆಲವು ಸಂಸ್ಥೆಗಳು, ಕಂಪನಿಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ಅದರ ಪರಿಣಾಮವೇ ಸಂಬಳ ಕಡಿತ. ಸಣ್ಣ ಕೈಗಾರಿಕೆಗಳು ಕೆಲವು ಬಾಗಿಲು ಮುಚ್ಚಿವೆ. ಒಬ್ಬೊಬ್ಬರದೂ ಒಂದೊಂದು ರೀತಿಯ ಬವಣೆ. ಬೆಲೆ ಏರಿಕೆಯ ಬಿಸಿ ಎಲ್ಲರನ್ನೂ ತಟ್ಟಿದೆ.

ಈಗ ಹೋಟೆಲ್‌ ಕಾಫಿ– ತಿಂಡಿ ಕೂಡ ದುಬಾರಿಯಾಗಿರುವುದು ಮತ್ತೊಂದು ಬಗೆಯಲ್ಲಿ ಬರೆ.ಅಪರೂಪಕ್ಕೆ ತಿನ್ನುವಾಗ ಸಿಹಿಗಿಂತ ಕಹಿಯ ಅನುಭವವೇ ಆಗುತ್ತದೆ. ಬದುಕಬೇಕಾದ ಅನಿವಾರ್ಯದಿಂದ ಸಕಲವನ್ನೂ ಸಹಿಸಿಕೊಳ್ಳುವ ತಾಳ್ಮೆ ನಮ್ಮ ಜನರಿಗೆ ಬಂದಿದೆ.

- ಮಲ್ಲತ್ತಹಳ್ಳಿ ಡಾ. ಎಚ್.ತುಕಾರಾಂ,ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.