ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊಸ ಮರಳು ನೀತಿಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ. ಕೆಲವು ಕಡೆ ಮರಳು ಕ್ವಾರಿಗಳಿಗೆ ಸರ್ಕಾರ ಅನುಮತಿ ನೀಡಿದ್ದರಿಂದ, ಮರಳು ಬೇಕಾಬಿಟ್ಟಿ ಹೊರಗಡೆ ಸಾಗಣೆ
ಯಾಗುತ್ತಿತ್ತು. ದಂಧೆಯ ಸ್ವರೂಪ ಪಡೆದುಕೊಂಡಿತ್ತು. ಸರ್ಕಾರದಿಂದ ವಸತಿ ಯೋಜನೆಯಡಿ ಮನೆ ಪಡೆದುಕೊಂಡ ಬಡವರಿಗೆ ದುಬಾರಿ ಹಣ ಕೊಟ್ಟು ಸ್ಥಳೀಯವಾಗಿ ಮರಳು ಪಡೆಯುವುದು ಕಷ್ಟಸಾಧ್ಯವಾಗಿತ್ತು. ಬಡವರ ಕಷ್ಟ ಹೇಳತೀರದಾಗಿತ್ತು. ಸರ್ಕಾರಕ್ಕೆ ಬರುವ ರಾಯಧನದಲ್ಲಿ ಅರ್ಧ ಭಾಗವನ್ನು ಗ್ರಾಮ ಪಂಚಾಯಿತಿಗೆ ನೀಡುವುದು, ಬಡವರಿಗೆ ರಿಯಾಯಿತಿ ದರದಲ್ಲಿ ಮರಳು ನೀಡುವ ಅಧಿಕಾರವನ್ನು ಗ್ರಾಮ ಪಂಚಾಯಿತಿಗೇ ನೀಡಿರುವುದು, ದ್ವಿಚಕ್ರ ವಾಹನ, ಎತ್ತಿನ ಗಾಡಿ ಮುಂತಾದವುಗಳ ಮೇಲೆ ಮರಳು ಕೊಂಡೊಯ್ಯುವ ರೈತರು ಮತ್ತು ಬಡವರಿಗೆ ರಾಯಧನದಿಂದ ರಿಯಾಯಿತಿ ನೀಡುವಂಥ ನಿರ್ಧಾರಗಳು ನಿಜಕ್ಕೂ ಉತ್ತಮವಾದವು.
ನಮ್ಮಲ್ಲಿ ಸರ್ಕಾರ ತರುವ ಕಾನೂನುಗಳೆಲ್ಲಾ ಒಳ್ಳೆಯ ಆಶಯಗಳನ್ನೇ ಹೊಂದಿರುತ್ತವೆ. ಆದರೆ ತಳಮಟ್ಟದಲ್ಲಿ ಅವು ಜಾರಿಗೊಳ್ಳುವಾಗ ದುರುಪಯೋಗ ಆಗುವುದು ಸಾಮಾನ್ಯವಾಗಿದೆ. ಹಾಗಾಗದಂತೆ ನೋಡಿಕೊಳ್ಳುವುದರಲ್ಲೇ ಆ ಯೋಜನೆಯ ಸಫಲತೆ ಅಡಗಿರುತ್ತದೆ.
- ಚಾವಲ್ಮನೆ ಸುರೇಶ್ ನಾಯಕ್,ಹಾಲ್ಮತ್ತೂರು, ಕೊಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.