50ವರ್ಷಗಳಹಿಂದೆಅಂದಿನಪ್ರಧಾನಿ ಇಂದಿರಾಗಾಂಧಿಅವರು ‘ತ್ರಿಭಾಷಾ ಸೂತ್ರವೇ ಭಾಷಾ ಸಮಸ್ಯೆಗೆ ಪರಿಹಾರ. ಇದಕ್ಕೂಉತ್ತಮಪರಿಹಾರವನ್ನು ಯಾರೂಸೂಚಿಸಿಲ್ಲ’ ಎಂದು ತಿರುವನಂತಪುರದಲ್ಲಿ ಹೇಳಿದ್ದಾರೆ (ಪ್ರ.ವಾ., 50 ವರ್ಷಗಳ ಹಿಂದೆ, ಮೇ19). ನನ್ನಪ್ರಕಾರ, ವಿವಿಧ ಭಾಷೆಗಳುಳ್ಳ ಭಾರತಕ್ಕೆ ದ್ವಿಭಾಷಾ ಸೂತ್ರವೇ ನ್ಯಾಯಯುತವಾದಪರಿಹಾರ.
ಆಯಾಪ್ರಾಂತದಲ್ಲಿ ಹೆಚ್ಚುಜನರುಮಾತನಾಡುವಭಾಷೆಯ ಜೊತೆಗೆ ಇಂಗ್ಲಿಷ್ ಇರಬೇಕು. ಉದಾಹರಣೆಗೆ: ಕರ್ನಾಟಕದಲ್ಲಿ ಕನ್ನಡ, ರಾಜ್ಯಗಳನಡುವೆಸಂಪರ್ಕಕ್ಕೆ, ವಾಣಿಜ್ಯವ್ಯವಹಾರಕ್ಕೆ, ವಿಜ್ಞಾನ ವ್ಯಾಸಂಗಕ್ಕೆ ಇಂಗ್ಲಿಷ್. ಕೆಲವರುಒಪ್ಪಬಹುದು. ಇನ್ನು ಕೆಲವರು ಒಪ್ಪದೇ ಇರಬಹುದು. ಅದರಲ್ಲೂ ಉತ್ತರ ಭಾರತದ ಕೆಲವರಿಗೆ ಇದು ರುಚಿಸದಿರಬಹುದು. ಅಂತಿಮವಾಗಿನ್ಯಾಯಯುತವಾಗಿ ಉಳಿಯಬೇಕಾದದ್ದು, ಉಳಿಯುವುದು ದ್ವಿಭಾಷಾಸೂತ್ರವೇ.ಹಿಂದಿಹೇರಿಕೆಯನ್ನುಒಪ್ಪಲಾಗದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.