ADVERTISEMENT

ಸನ್ನಿ ಡಿಯೋಲ್‌ ಕಸ ಹೊಡೆದಿದ್ದರೇ?

​ಪ್ರಜಾವಾಣಿ ವಾರ್ತೆ
Published 9 ಮೇ 2019, 18:01 IST
Last Updated 9 ಮೇ 2019, 18:01 IST

ಬಿಜೆಪಿಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಬೇಕಿದ್ದರೆ ಅಥವಾ ಪಕ್ಷದಲ್ಲಿ ಯಾವುದಾದರೂ ಹುದ್ದೆ ಬೇಕಿದ್ದರೆ ಅಂತಹವರು ಕನಿಷ್ಠ ಎರಡು ವರ್ಷಗಳಾದರೂ ಪಕ್ಷದ ಕಾರ್ಯಾಲಯದಲ್ಲಿ ಕಸ ಹೊಡೆಯಬೇಕು ಎಂದು, ಆ ಪಕ್ಷದ ಧುರೀಣರೊಬ್ಬರು ಇತ್ತೀಚೆಗೆ ಹೇಳಿಕೆ ಕೊಟ್ಟಿದ್ದರು.

ಹಾಗಿದ್ದರೆ, ಬಾಲಿವುಡ್ ನಟ ಸನ್ನಿ ಡಿಯೋಲ್‌ ಬಿಜೆಪಿ ಸೇರಿ, ಸದಸ್ಯತ್ವದ ನಮೂನೆಯ ಮೇಲಿನ ಅವರ ಸಹಿ ಒಣಗುವ ಮೊದಲೇ ಅವರಿಗೆ ಪಂಜಾಬ್‌ನ ಗುರುದಾಸಪುರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ದೊರಕಿದ್ದು ಹೇಗೆ?

ಅವರು ಎಷ್ಟು ವರ್ಷ ಬಿಜೆಪಿ ಕಚೇರಿಯಲ್ಲಿ ಕಸ ಹೊಡೆದಿದ್ದರು? ಬಿಜೆಪಿಯಲ್ಲಿಯೂ ಕೆಲವರಿಗೆ, ಮುಖ್ಯವಾಗಿ ಬಾಲಿವುಡ್ ತಾರೆಯರಿಗೆ ಮತ್ತು ಕ್ರಿಕೆಟ್ ಆಟಗಾರರಿಗೆ ‘ಮೀಸಲಾತಿ’ ನೀಡುತ್ತಿರುವುದು ವಿಷಾದನೀಯ.
-ರಮಾನಂದ ಶರ್ಮಾ,ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.