ಅರಕಲಗೂಡಿನಲ್ಲಿ ಅಶ್ರಯ ಪಡೆದಿರುವ ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಬಿಸ್ಕೆಟ್ ಪೊಟ್ಟಣಗಳನ್ನು ಕೈಯಲ್ಲಿ ನೀಡುವ ಬದಲು ಸಚಿವ ಎಚ್.ಡಿ ರೆವಣ್ಣ ಅವರು ಪ್ರಾಣಿ ಗಳಿಗೆ ಬಿಸಾಡುವಂತೆ ಎಸೆದಿರುವುದು ಖಂಡನಾರ್ಹ. ನೆರೆ
ಯಿಂದಾಗಿ ಎಲ್ಲವನ್ನೂ ಕಳೆದಕೊಂಡು, ಬೀದಿಗೆ ಬಿದ್ದಿರುವ ಜನರನ್ನು ಸಂತೈಸುವ ಬದಲು ಸಚಿವರು ಅಧಿಕಾರದ ದರ್ಪ ತೊರಿರುವುದು ನಾಚಿಕೆಗೇಡಿನ ಸಂಗತಿ.
ಚುನಾವಣೆಯ ಸಂದರ್ಭದಲ್ಲಿ ಮೈ ಬಗ್ಗಿಸಿ ಮತ ಕೇಳುವ ಇಂಥ ನಾಯಕರು ಅಧಿಕಾರ ಬಂದ ಮಾತ್ರಕ್ಕೆ ಸಭ್ಯತೆ ಮೀರಿ ನಡೆದುಕೊಳ್ಳುವುದು ಸರಿಯೇ? ಸಂತ್ರಸ್ತರನ್ನು ಸಂತೈಸಿ, ಆಹಾರವನ್ನು ಕೈಯಲ್ಲಿ ನೀಡುವಷ್ಟು ವ್ಯವಧಾನ ಇಲ್ಲದಿದ್ದರೆ ಶಿಬಿರಗಳಿಗೆ ಭೇಟಿ ನೀಡುವ ಅಗತ್ಯವಾದರೂ ಏನು? ಸಚಿವರು ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳಬೇಕು.
-ರೂಪೇಶ ವಿದ್ಯಾರಣ್ಯಪುರ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.