ADVERTISEMENT

ಮತ್ತಷ್ಟು ಕ್ರೂರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2018, 17:20 IST
Last Updated 21 ಸೆಪ್ಟೆಂಬರ್ 2018, 17:20 IST

ಜೀತ ಪದ್ಧತಿ ಎಂಬುದು ಈಗ ಭೂಮಿಯ ಮೇಲೆ ಇಲ್ಲವೇ ಇಲ್ಲ ಎಂದು ನಮ್ಮಲ್ಲಿ ಬಹುತೇಕರು ಭಾವಿಸಿದ್ದಾರೆ. ಈ ಬಗ್ಗೆ ಯಾರನ್ನಾದರೂ ಕೇಳಿದರೆ ‘ನೀನು ಇನ್ನೂ ಯಾವ ಕಾಲದಲ್ಲಿದ್ದೀಯೋ’ ಎಂದು ಮರುಪ್ರಶ್ನೆ ಹಾಕಿ ನಮ್ಮ ಬಾಯಿ ಮುಚ್ಚಿಸಿಬಿಡುತ್ತಾರೆ. ಆದರೆ ವಾಸ್ತವದಲ್ಲಿ ಜೀತ ಪದ್ಧತಿ ಎಂಬುದು ಈಗ ಮತ್ತಷ್ಟು ಕ್ರೂರವಾಗಿದೆ.

ಸಾಲ ಮರುಪಾವತಿಸದ ಕಾರಣ ಮದ್ದೂರು ತಾಲ್ಲೂಕಿನ ಬೆಕ್ಕಳಲೆ ಗ್ರಾಮದ ಮಹಿಳೆಯೊಬ್ಬರನ್ನು ನಾಲ್ಕೈದು ಮಂದಿ ಗಂಡಸರು ಹಾಡಹಗಲೇ ಗ್ರಾಮಸ್ಥರ ಎದುರೇ ಜೀತಕ್ಕೆ ಎಳೆದೊಯ್ದ ಪ್ರಸಂಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವುದೇ ಈ ಅನಿಷ್ಟ ಪದ್ಧತಿ ಇನ್ನೂ ಜೀವಂತ ಇದೆ ಎಂಬುದಕ್ಕೆ ನಿದರ್ಶನ.

ಇಂತಹ ಜೀವವಿರೋಧಿ ಪದ್ಧತಿಯನ್ನು ಇನ್ನೂ ಹೋಗಲಾಡಿಸಲಾಗದ ನಮ್ಮ ಆಡಳಿತ ವ್ಯವಸ್ಥೆಗೆ ತಾರತಮ್ಯರಹಿತ ಸಮಸಮಾಜ ನಿರ್ಮಿಸಲು, ವ್ಯಕ್ತಿಯ ಹಕ್ಕು ಮತ್ತು ಘನತೆ ರಕ್ಷಿಸಲು ಸಾಧ್ಯವೇ? ಇಂತಹದೊಂದು ಪ್ರಸಂಗ ಬಯಲಾದಾಗ ತೋರಿಕೆಯ ಕ್ರಮ ಕೈಗೊಳ್ಳುವುದರಿಂದ ಜೀತಪದ್ಧತಿಯ ನಿರ್ಮೂಲನೆ ಸಾಧ್ಯವಿಲ್ಲ. ಅದಕ್ಕೆ ಇಚ್ಛಾಶಕ್ತಿ ಮತ್ತು ಬದ್ಧತೆ ಬೇಕು. ಸರ್ಕಾರ ಈಗಲಾದರೂ ಅದನ್ನು ಪ್ರದರ್ಶಿಸಲಿ.

ADVERTISEMENT

ಪ್ರಣಾಮ್ ಶೆಟ್ಟಿ, ಕಲ್ಲಡ್ಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.