ಗಂಗಾ ನದಿಯ ಸ್ವಚ್ಛತೆಗಾಗಿ ಆಗ್ರಹಿಸಿ ಜೂನ್ 22ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಜಿ.ಡಿ. ಅಗರ್ವಾಲ್ ಅವರು ನಿಧನರಾದ ಸುದ್ದಿ ಓದಿ ತುಂಬ ಬೇಸರವಾಯಿತು.
ಸ್ವಚ್ಛ ಭಾರತ ಅಭಿಯಾನಕ್ಕಾಗಿ ಪೊರಕೆ ಹಿಡಿದು ಪ್ರದರ್ಶನ ನೀಡುವ, ‘ಚಾಂಪಿಯನ್ ಆಫ್ ದ ಅರ್ಥ್’ ಪ್ರಶಸ್ತಿಯನ್ನು ಹೆಮ್ಮೆಯಿಂದ ಸ್ವೀಕರಿಸುವ ಮತ್ತು 2014ರ ಚುನಾವಣೆಯ ಸಂದರ್ಭದಲ್ಲಿ ‘ಗಂಗಾ ಮಾತೆ ನನ್ನನ್ನು ಬರಮಾಡಿಕೊಂಡಿದ್ದಾಳೆ’ ಎಂದು ಭಾಷಣ ಬಿಗಿದಿದ್ದ ಪ್ರಧಾನಿ ಮೋದಿಯವರು, 110 ದಿನಗಳಿಂದ ನಿರಂತರ ಉಪವಾಸ ಮಾಡುತ್ತಿದ್ದ 86 ವರ್ಷದ ವಯೋವೃದ್ಧರನ್ನು ಯಾಕೆ ಸಂತೈಸಲಿಲ್ಲ?
‘ಗಂಗಾ ನದಿಯ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ, ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿಯಿರಿ’ ಎಂದು ಅಗರ್ವಾಲ್ ಅವರ ಮನವೊಲಿಸುವುದು ಪ್ರಧಾನಿಗೆ ಕಷ್ಟವಾಗಿತ್ತೇ?
ಆನಂದ ರಾಮತೀರ್ಥ, ಜಮಖಂಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.