ADVERTISEMENT

ಪ್ರಜಾವಾಣಿ@75: ಸಮನ್ವಯದ ಎಚ್ಚರ ಅಚ್ಚುಮೆಚ್ಚು –ನಾಗತಿಹಳ್ಳಿ ಚಂದ್ರಶೇಖರ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 11:46 IST
Last Updated 20 ಅಕ್ಟೋಬರ್ 2022, 11:46 IST
ನಾಗತಿಹಳ್ಳಿ ಚಂದ್ರಶೇಖರ
ನಾಗತಿಹಳ್ಳಿ ಚಂದ್ರಶೇಖರ   

…ವಿಚಿತ್ರ ಅನಿಸಬಹುದು. ನಾನು ಪತ್ರಿಕೆ ತೆರೆದಾಗ ಮೊದಲು ನೋಡುವುದು ‘ಗುಂಡಣ್ಣ’ನ ವ್ಯಂಗ್ಯ ಚಿತ್ರ ಮಾಲೆ. ಉಳಿದದ್ದುಆಮೇಲೆ!.
ನಿರ್ಲಿಪ್ತ ನೀತಿಯನ್ನು ಅನುಸರಿಸಿ, ನಿರ್ದಿಷ್ಟ ಅಂತರವನ್ನು ಕಾಯ್ದುಕೊಂಡು ಪ್ರಭುತ್ವವನ್ನು, ಪಕ್ಷಗಳನ್ನು ದಾಖಲೆಸಹಿತ ನಿರುದ್ವಿಗ್ನ ಭಾಷೆಯಲ್ಲಿ ಟೀಕೆಗೆ ಒಳಪಡಿಸುವ ‘ಪ್ರಜಾವಾಣಿ’ ನನಗೆ ಇಷ್ಟ.

ಸ್ಪರ್ಧೆಗೆ ಬಿದ್ದಂತೆ ಆಳುವವರನ್ನು ಹೊಗಳುವ ರಾಶಿ ಪತ್ರಿಕೆಗಳ ನಡುವೆ ಸತ್ಯಕ್ಕೆ ಆದಷ್ಟೂ ಸಮೀಪವಾಗಿರಲು ಯತ್ನಿಸುವ ‘ಪ್ರಜಾವಾಣಿ’ ಕನ್ನಡ ವೈಚಾರಿಕ ಪ್ರಜ್ಞೆಯ ಪ್ರತಿಬಿಂಬ. ಎಡಬಲದ ಅತಿರೇಕಗಳ ನಡುವೆ ಅದು ಕಾಯ್ದುಕೊಂಡಿರುವ ಸಮನ್ವಯದ ಎಚ್ಚರ ನನಗೆ ಅಚ್ಚುಮೆಚ್ಚು.

80ರ ದಶಕದಿಂದ, ಎಂ.ಬಿ. ಸಿಂಗ್ ಅವರ ಕಾಲದಿಂದ, ಈವರೆಗೆ ನನ್ನ 30ಕ್ಕೂ ಹೆಚ್ಚು ಸಣ್ಣಕತೆಗಳು ಇಲ್ಲಿ ಪ್ರಕಟಗೊಂಡಿವೆ. ಒಂದು ವರ್ಷ ಕಾಲ ಬರೆದ ನನ್ನ ‘ರೆಕ್ಕೆ ಬೇರು’ ಅಂಕಣ ನನಗೆ ತುಂಬು ಧನ್ಯತೆಯನ್ನು ಕೊಟ್ಟಿದೆ. ಇಲ್ಲಿ ದಕ್ಕಿದ ಪ್ರಬುದ್ಧ ಓದುಗರು ಅಪಾರ. ನಾನು ‘ಪ್ರಜಾವಾಣಿ’ಯನ್ನು ನಿಯತವಾಗಿ ಓದುವುದು ಮಾತ್ರವಲ್ಲ; ನನ್ನ ಸಿನಿಮಾ ಪಾತ್ರಗಳಿಂದಲೂ ಓದಿಸಿದ್ದೇನೆ! ಮೌಲ್ಯಗೆಡದೆ ಮುಕ್ಕಾಲು ಶತಮಾನ ಮುಗಿಸಿರುವ ಪತ್ರಿಕೆಗೆ ಶುಭಾಶಯಗಳು!

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.