ಭಾರತೀಯ ರಿಸರ್ವ್ ಬ್ಯಾಂಕ್ ಕರೆನ್ಸಿ ನೋಟುಗಳ ಮೇಲೆ ಕವಿ ರವೀಂದ್ರನಾಥ ಟ್ಯಾಗೋರ್ ಮತ್ತು ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಭಾವಚಿತ್ರಗಳನ್ನು ಮುದ್ರಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಸ್ಪಷ್ಟಪಡಿಸಿರುವುದು ಸಂತಸದ ವಿಷಯ. ಟ್ಯಾಗೋರ್ ಮತ್ತು ಕಲಾಂ ಅವರು ಭಾರತ ಕಂಡ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಾದರೂ ಮಹಾತ್ಮ ಗಾಂಧಿ ಅವರ ಸ್ಥಾನವನ್ನು ತುಂಬಲಾರರು.
ಈ ರೀತಿಯ ಬದಲಾವಣೆ ಭವಿಷ್ಯದಲ್ಲಿ ಕೋಲಾಹಲಕ್ಕೆ ಅವಕಾಶ ನೀಡುತ್ತದೆ. ಪ್ರತಿಯೊಂದು ಜಾತಿ ಜನಾಂಗವೂ ತಮ್ಮ ತಮ್ಮ ಧರ್ಮಗುರುವಿನ ಅಥವಾ ಮಠಾಧೀಶರ ಭಾವಚಿತ್ರಗಳನ್ನು ನೋಟಿನ ಮೇಲೆ ಮುದ್ರಿಸುವಂತೆ ಒತ್ತಾಯಿಸಬಹುದು. ಅಲ್ಲದೆ ಮಹಾತ್ಮರ ಭಾವಚಿತ್ರ ಬದಲಾವಣೆಯ ಹಿಂದೆ ಮತೀಯವಾದಿ ಜನರ ಕುತಂತ್ರ ಇರುವ ಸಾಧ್ಯತೆಗಳೂ ಇರಬಹುದು. ಈಗ ಬದಲಾವಣೆಯಾದರೆ ಮುಂದೊಂದು ದಿನ ತಮ್ಮ ಧಾರ್ಮಿಕ ನಾಯಕ ಅಥವಾ ರಾಜಕೀಯ ಮುಖಂಡನ ಚಿತ್ರವನ್ನು ಮುದ್ರಿಸಲು ಅವಕಾಶ ದೊರೆಯುವುದೆಂಬ ದೂರದೃಷ್ಟಿ ಇರಬಹುದು. ಇವೆಲ್ಲಕ್ಕೂ ತೆರೆ ಎಳೆದಿರುವ ರಿಸರ್ವ್ ಬ್ಯಾಂಕಿನ ಕ್ರಮ ಅಭಿನಂದನಾರ್ಹ.
-ಮೋದೂರು ಮಹೇಶಾರಾಧ್ಯ, ಹುಣಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.