‘ಹೀಗಿದೆ ನೋಡಿ ನಮ್ಮ ಶಾಲೆ’ ಲೇಖನಗಳನ್ನು ಗಮನಿಸುತ್ತಿರುವೆ. ಸರ್ಕಾರಿ ಶಾಲೆಗಳ ಸ್ಥಿತಿ ಹಾಗಿರಬಹುದು, ಆದರೆ ಖಾಸಗಿ ಶಾಲೆಗಳು ಚೆನ್ನಾಗಿವೆಯೇ? ಈ ಪ್ರಶ್ನೆ ಏಕೆಂದರೆ, ಸರ್ಕಾರಿ ಶಾಲೆಗಳ ದುಃಸ್ಥಿತಿಯ ಬಗ್ಗೆ ಮಾತ್ರ ಬರೆಯುತ್ತಾ ಹೋದರೆ ‘ಖಾಸಗಿ ಶಾಲೆಗಳು ಚೆನ್ನಾಗಿವೆ’ ಎಂದು ಓದುಗರಿಗೆ ಪರೋಕ್ಷವಾಗಿ ಹೇಳಿದಂತಾಗುತ್ತದೆ.
ಹಾಗೆ ನೋಡಿದರೆ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳೇ ಚೆನ್ನಾಗಿವೆ. ಸರ್ಕಾರಿ ವ್ಯವಸ್ಥೆ ಎಂದಮೇಲೆ ಕಟ್ಟಡಗಳ ದುರವಸ್ಥೆ ಇದ್ದೇ ಇರುತ್ತದೆ. ಅದರಂತೆ ಎಲ್ಲ ಖಾಸಗಿ ಶಾಲೆಗಳ ಕಟ್ಟಡಗಳೂ ಚೆನ್ನಾಗಿರುವುದಿಲ್ಲ. ಆ ಬಗ್ಗೆ ನೀವೇಕೆ ಬರೆಯುವುದಿಲ್ಲ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.