ADVERTISEMENT

ಗಂಭೀರವಾಗಿ ತೆಗೆದುಕೊಳ್ಳುವುದೇಕೆ?

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 19:30 IST
Last Updated 21 ಫೆಬ್ರುವರಿ 2020, 19:30 IST

ನಮ್ಮ ಮಾತು, ಘೋಷಣೆಗಳು ಕೃತಿರೂಪ ತಾಳದೆ ಬರೀ ಮಾತಾಗೇ ಉಳಿದರೆ ಸಾಮಾಜಿಕ ವಂಚನೆಯಾಗುತ್ತದೆ. ಇಂತಹ ವಂಚನೆಯನ್ನು ಸಮಾಜ ಗಂಭೀರವಾಗಿ ತೆಗೆದುಕೊಳ್ಳದೆ ಕಾಲಾಂತರದಲ್ಲಿ ಸುಮ್ಮನೆ ನಿರ್ಲಕ್ಷಿಸುತ್ತದೆ ಎಂಬ ತಥ್ಯ ನಮ್ಮ ದೇಶದಲ್ಲಿ ಇತ್ತೀಚಿನ ಕೆಲ ವರ್ಷಗಳ ಅವಧಿಯಲ್ಲಿ ಹಲವು ಬಾರಿ ಸಾಬೀತಾಗಿದೆ.

ವಸ್ತುಸ್ಥಿತಿ ಹೀಗಿರುವಾಗ, ಪಾಕಿಸ್ತಾನದ ಪರಿಸ್ಥಿತಿಯನ್ನು ತನ್ನ ಬದುಕಿನಲ್ಲಿ ಎಂದೂ ಕಂಡರಿಯದ, ಆ ನಿಟ್ಟಿನಲ್ಲಿ ಒಮ್ಮೆಯೂ ಕಾರ್ಯಪ್ರವೃತ್ತಳಾಗದ ಒಬ್ಬ ಯುವತಿ, ಪಾಕಿಸ್ತಾನವನ್ನು ಖಾಲಿ ಶಬ್ದಗಳಲ್ಲಿ ಸ್ತುತಿಸಿದರೆ ಅದನ್ನು ಸುಮ್ಮನೆ ನಿರ್ಲಕ್ಷಿಸುವುದು ಬಿಟ್ಟು ಗಂಭೀರವಾಗಿ ತೆಗೆದುಕೊಳ್ಳುವುದೇ? ದೇಶದ್ರೋಹದ ಕೇಸು ಜಡಿಯುವುದೇ? ಭಾರತದಲ್ಲಿ ಮಾತು ಸೋಲಲು ಕಾರಣ ಇಲ್ಲದಿಲ್ಲ. ಜೈಕಾರ, ಬೈಗುಳಗಳೇ ನಿರ್ಣಾಯಕವಾದಾಗಸ್ತುತಿ–ನಿಂದೆಗಳಾಚೆಗಿನಮಾತು, ಚಿಂತನೆಗಳು ಹಿಂದಕ್ಕೆ ಸರಿದುಬಿಡುತ್ತವೆ.

ಒಬ್ಬ ಭಾರತೀಯನು ಪಾಕಿಸ್ತಾನಕ್ಕೆ ಏನೂ ಮಾಡದೆ ಬರಿಮಾತಿನಲ್ಲಿ ಜಿಂದಾಬಾದ್‌ ಎಂದು ಹೇಳಿದರೆ ಅದು ಶದ್ರೋಹವಾಗುತ್ತದೋ ಇಲ್ಲವೋ ತಿಳಿಯದು. ಆದರೆ, ಅವನು ‘ಹಿಂದೂಸ್ತಾನ್‌ ಜಿಂದಾಬಾದ್‌’ ಎಂದು ಬಾಯಲ್ಲಿ ಹೇಳಿ, ದೇಶಕ್ಕೆ ಏನನ್ನೂ ಮಾಡದಿದ್ದರೆ ಅದು ನಿಜಕ್ಕೂ ದೇಶದ್ರೋಹದ ಕೆಲಸವಾಗುತ್ತದೆ.

ADVERTISEMENT

-ಟಿ.ಎನ್.‌ವಾಸುದೇವಮೂರ್ತಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.