ADVERTISEMENT

ಮೇಳ ಠುಸ್!

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 19:45 IST
Last Updated 18 ಜುಲೈ 2019, 19:45 IST

‘ಬದಲೀ ಪ್ಲಾಸ್ಟಿಕ್’ ಕುರಿತ ಮೇಳ ಏರ್ಪಡಿಸಿ, ಬಳಕೆದಾರರನ್ನು ಆಕರ್ಷಿಸಲು ಮೇಳದಲ್ಲಿಡಾನ್ಸ್, ಕವಿಗೋಷ್ಠಿ, ಜಾದೂ ಪ್ರದರ್ಶನ ಇತ್ಯಾದಿ ಇಡಬಹುದೆಂದು ನಾಗೇಶ ಹೆಗಡೆ ಅವರುಸಲಹೆ ನೀಡಿದ್ದಾರೆ (ವಾ.ವಾ., ಜುಲೈ 18). ನಿಷೇಧಿತ ಪ್ಲಾಸ್ಟಿಕ್ಕನ್ನು ಬಿದಿರಿನ ಖಾಲಿ ಬುಟ್ಟಿಯೊಳಗೆ ಹಾಕಿ ಬದಲೀಪ್ಲಾಸ್ಟಿಕ್ಕನ್ನು ಹೊರತೆಗೆಯುವ ಜಾದೂವನ್ನೂ, ಬಾಳೆ ಎಲೆ, ಕಬ್ಬಿನ ಗರಿ, ಅಡಕೆ ಹಾಳೆ ಮೊದಲಾದ ಬದಲಿಗಳ ಡಾನ್ಸನ್ನೂ ಇಡಬಹುದು.

ಕವಿಗೋಷ್ಠಿ ಮಾತ್ರ ಬೇಡ. ಏಕೆಂದರೆ,ನವ್ಯಕವಿಗಳು ಸ್ವರಚಿತ ಕವನ ಓದತೊಡಗಿದಾಗ, ಆ ಕವನ ಅರ್ಥವಾಗದೆ ಅರ್ಧ ಜನ ಎದ್ದು ಹೋಗುತ್ತಾರೆ. ನಿಷೇಧಿತ ಪ್ಲಾಸ್ಟಿಕ್ಕೆಂಬ ರಾಕ್ಷಸನ ಉಪಟಳ ತಾಳಲಾರದೆ ಭೂತಾಯಿಯುಪರಿಪರಿಯಾಗಿ ಗೋಳಾಡುವ ಪರಿಯ ಬಣ್ಣನೆಯ ಕವನಗಳನ್ನು ಕಣ್ಕಟ್ಟು(ವಂತೆ) ಕವಿಗಳು ಕೊರೆಯತೊಡಗಿದಾಗ (ದುಃಖ) ಸಹಿಸಲಾರದೆ ಇನ್ನರ್ಧ ಜನ ಹೊರಟುಹೋಗುತ್ತಾರೆ. ಕೊನೆಗೆ,ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳಂತೆ, ಅವರ ಕವನಕ್ಕೆ ಇವರು, ಇವರ ಕವನಕ್ಕೆ ಅವರು ‘ವಾಹ್ ವಾಹ್’ ಅಂದುಕೊಂಡು ಗೋಷ್ಠಿ ಮುಗಿಸಬೇಕಾಗುತ್ತದೆ!

–ಎಚ್. ಆನಂದರಾಮ ಶಾಸ್ತ್ರೀ,ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.