ಉದ್ಯೋಗ ಖಾತರಿ, ಇ-ಸ್ವತ್ತು ಸೇರಿದಂತೆ ಹಲವು ಯೋಜನೆಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿವೆ. ಈಗ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನೂ ಈ ಪಂಚಾಯಿತಿ ವ್ಯಾಪ್ತಿಗೇ ಸೇರಿಸಲಾಗಿದೆ. ವಿವಿಧ ಯೋಜನೆಗಳ ಅರ್ಜಿ ವಿಲೇವಾರಿಯು ಸಿಬ್ಬಂದಿ ಕೊರತೆಯಿಂದ ಈಗಾಗಲೇ ಕುಂಠಿತಗೊಂಡಿದೆ. ಹೀಗಿರುವಾಗ, ...ಕಿಸಾನ್‌ನಂಥ ದೊಡ್ಡ ಯೋಜನೆಯನ್ನೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ತರುವುದರಿಂದ ಈ ಯೋಜನೆಗಳ ಲಾಭ ಸಾರ್ವಜನಿಕರಿಗೆ ತಲುಪಲು ವಿಳಂಬವಾಗುತ್ತದೆ. ಹಾಗಾಗಿ, ...ಕಿಸಾನ್ ಯೋಜನೆಯನ್ನು ಬೇರೆ ಇಲಾಖೆಗೆ ವಹಿಸಬೇಕು ಅಥವಾ ಈ ಕಾರ್ಯಕ್ಕಾಗಿ ಅನ್ಯ ಇಲಾಖೆಯಿಂದ ಸಿಬ್ಬಂದಿಯನ್ನು ಗ್ರಾಮ ಪಂಚಾಯಿತಿಗೆ ನಿಯೋಜಿಸಬೇಕು.
–ಪುನೀತ್ ಎನ್.,ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.