ADVERTISEMENT

ಪ್ರಜಾವಾಣಿ@75: ಈ ಓದೆ ನಿಜವಾದ ಜೀವಂತಿಕೆ -ರವೀಂದ್ರ ಸಿಂಗ್

ಪ್ರಜಾವಾಣಿ ವಿಶೇಷ
Published 19 ನವೆಂಬರ್ 2022, 10:09 IST
Last Updated 19 ನವೆಂಬರ್ 2022, 10:09 IST
   

ಈ ಓದೆ ನಿಜವಾದ ಜೀವಂತಿಕೆ

ಶಾಲಾ ದಿನಗಳಲ್ಲಿ ಅಂಗಡಿ ಮುಂದೆ ನೇತು ಹಾಕಿರುತ್ತಿದ್ದ ಪ್ರಜಾವಾಣಿ ಪತ್ರಿಕೆಗಳನ್ನು ನೋಡಿಕೊಂಡು ಹೋಗುವುದೇ ಒಂದು ಮಜಬೂತು ಅನುಭವ. ಅದೇ ಸಂಜೆ ಶಾಲೆಯಿಂದ ವಾಪಸ್ಸು ಹೊರಟು ಬಂದಾಗ ಬಸ್ಸಿನಲ್ಲಿ ಒಬ್ಬ ಹಿರೀಕರು ಓದಿ ಮುಗಿಸಿದ ಪ್ರಜಾವಾಣಿಯನ್ನು ದಿನಾಲು ನನ್ನ ಕೈಗಿತ್ತು ಕಳುಹಿಸುತ್ತಿದ್ದರು. ಮನೆಗೆ ಬಂದು ಅದನ್ನು ಓದಿದ ನಂತರವಷ್ಟೇ ಶಾಲೆಯ ಹೋಂವರ್ಕ್. ಅಲ್ಲಿಂದ ಬೆಸೆದುಕೊಂಡ ಪ್ರಜಾವಾಣಿ ಬಂಧ ಈ ಅಮೃತ ಮಹೋತ್ಸವದವರೆಗೆ ಜೊತೆಯಾಗಿ ಬಂದಿದೆ. ಕಾಗದದ ಗುಣಮಟ್ಟದಿಂದ ಹಿಡಿದು ಅದರ ಹಿತವಾದ ಫಾಂಟಿನ ವಿನ್ಯಾಸ, ಸ್ಪಷ್ಟವಾಗಿ ಅಚ್ಚೊತ್ತಿಕೊಳ್ಳುವ ಚಿತ್ರಗಳು, ದಿಕ್ಕುತಪ್ಪಿಸುವ ಸುದ್ದಿಗಳಿಗೆ ರಾಜಿಮಾಡಿಕೊಳ್ಳದ ನಿಷ್ಠೆ. ಇವೆಲ್ಲ ಒಬ್ಬ ಓದುಗನಾದ ನನಗೆ ಅತಿಯಾಗಿ ಸೆಳೆದಿದೆ. ಸುದ್ದಿಯಲ್ಲಿ ನೈಜತೆಯನ್ನು ಪತ್ರಿಕಾ ಶಿಷ್ಟಾಚಾರವನ್ನು ಜವಾಬ್ದಾರಿಯಿಂದ ಪಾಲಿಸಿಕೊಂಡು ಹೆಚ್ಚು ಜಾಗರೂಕತೆಯ ಹೆಜ್ಜೆಗಳನ್ನಿಟ್ಟು ಸಾಗಿ ಬರುತ್ತಿರುವ ಈ ಪತ್ರಿಕೆ ಬಹಳವಾಗಿ ಕಾಡುವಂತದ್ದು. ಮುಂಜಾನೆ ಪ್ರಜಾವಾಣಿ ಕೈ ಬೆರಳುಗಳಿಗೆ ಸೋಕ್ಕಿದ್ದೆ ಹಕ್ಕಿಗೆ ರಕ್ಕೆ ಬಂದಂತೆ ಕಣ್ಣುಗಳಿಗೆ ನಿಜವಾದ ಜೀವಂತಿಗೆ ಸೃಷ್ಟಿಯಾಗುತ್ತೆ. ಓದಿದ ನಂತರ ತೃಪ್ತಿಯ ಭಾವ ತಂತಾನೆ ಆವರಿಸಿಕೊಂಡುಬಿಡುತ್ತೆ. ಇನ್ನು ಮುಂದೆಯೂ ಪ್ರಜಾವಾಣಿ ಪ್ರತಿಯೊಬ್ಬ ವಾಚಕನ ಪತ್ರಿಕೆಯಾಗಿ ಬೆಳೆಯಲಿ ಎಂದು ಆಶಿಸುವೆ.

- ರವೀಂದ್ರ ಸಿಂಗ್, ಕೋಲಾರ.

ADVERTISEMENT

****

ಜ್ಞಾನ ಭಂಡಾರ

ಅಮೃತ ಮಹೋತ್ಸವಕ್ಕೆ ಕಾಲಿಟ್ಟಿರುವ 'ಪ್ರಜಾವಾಣಿ'ಗೆ ನನ್ನ ತುಂಬು ಹೃದಯದ ಅಭಿನಂದನೆಗಳು. ನಾನು ಕಸಗೂಡಿಸುವ ಸಮಯಕ್ಕೆ ಸರಿಯಾಗಿ ಪತ್ರಿಕೆ ನನ್ನ ಕೈ ಸೇರುತ್ತೆ. ಬೇಗ ಬೇಗ ಕಸಗೂಡಿಸಿ, ಏನೋ ಓದುವ ತವಕ ಮೊದಲು ನನ್ನ ತಾಲೂಕಿನ ವಿಷಯ ಏನಿದೆ ಎಂದು ತಿಳಿದುಕೋಳ್ಳುವುದು ನಿಜಕ್ಕೂ ಬಹಳ ಖುಷಿ. ಕಲಿಕೋತ್ಸವ ಎಂದೆ ಹೇಳಬಹುದು.

ನಾನು ಪತ್ರಿಕೆ ಓದಲು ಪ್ರಾರಂಭಿಸಿದು1998 ರಿಂದ ಪ್ರತಿ ದಿನ ಬರುವ ವಿಶೇಷ ಪುರವಣಿ ಪುಟಗಳು ಸಂಗ್ರಹಿಸುವುದು ನನ್ನ ಹವ್ಯಾಸ ಆಗಿದೆ. ನಾನು ಓದಿದ ಮೇಲೆ ನನ್ನ ಶಾಲೆ ಮಕ್ಕಳಿಗೆ ಬಹಳ ಉಪಯುಕ್ತವಾಗಿದೆ. ಈ ಪತ್ರಿಕೆ ಎಂದರೆ ನನಗೆ ಹತ್ತಿರದ ಸಂಬಂಧಿಯಂತೆ ಸಂಬಂಧ ಬೆಸೆದಿದೆ. ಹೀಗೆ ಸಾವಿರಾರು ಶತಮಾನೋತ್ಸವದ ವರೆಗೆ ಮುಂದುವರಿಯಲಿ ಎಂದು ಹಾರೈಸುತ್ತೇನೆ.

-ಗಾಲಮ್ಮ ದಿನೇಶ್ ಶಿಂದೆ.

****

ಸಮಯವೇ ಉಳಿಯುವುದಿಲ್ಲ:

ಅರವತ್ತರ ದಶಕ ದಿಂದಲೂ ಪ್ರಜಾವಾಣಿ ಪತ್ರಿಕೆಯ ಮೇಲೇ ಒಲವು ಜಾಸ್ತಿ. ಆಗ ಪ್ರಾರಂಭ ವಾದ ಪ್ರಜಾವಾಣಿ ಪತ್ರಿಕೆಯ ಮೇಲಿನ ಒಡನಾಟ ಈಗಲೂ (ಈಗ ನನಗೆ 67 ವರ್ಷ) ಕಡಿಮೆ ಆಗಿಲ್ಲ.

ಪ್ರತಿದಿನ ಉಪಹಾರದ ನಂತರ ಸುಮಾರು ಎರಡು ಘಂಟೆಗಳ ಕಾಲ ವಾಚಕರ ವಾಣಿ, ಸಂಗತ, ವಿಶ್ಲೇಷಣೆ, ಚುರುಮುರಿ ಸಂಪಾದಕೀಯ, ದಿನದ ಟ್ವೀಟ್,ಬೆರಗಿನ ಬೆಳಕು ಶಿವಪುರಾಣ ಸಾರ ಗಳನ್ನು ಓದಿ, ನಂತರ ಊಟವಾದ ನಂತರ ಮಧ್ಯಾಹ್ನದ ನಿದ್ದೆಯ ನಂತರ ಪದ ಬಂಧ ಮತ್ತು sudoku ಮಾಡಿದರೆ ಅಂದಿನ ದಿನಚರಿ ಮುಕ್ತಾಯ.

ನಿವೃತ್ತಿಯ ನಂತರ ಸಮಯ ಹೇಗೆ ಕಳೆಯುತ್ತೀರಿ ಎಂದು ಕೇಳಿದರೆ, ನಮಗೆ ಸಮಯ ಕಳೆಯಲು ಸಮಯವೇ ಇರುವುದಿಲ್ಲ ಎನ್ನುತ್ತೇವೆ.
ಉಳಿದ ಸುದ್ದಿ ಸಮಾಚಾರಗಳನ್ನು ಟಿವಿ ಯಿಂದ ತಿಳಿದುಕೊಳ್ಳಬಹುದು. ಆದರೆ ಮೇಲೆ ತಿಳಿಸಿದ ಅಂಕಣಗಳಿಗೆ ಪ್ರಜಾವಾಣಿ ಪತ್ರಿಕೆಯೇ ಅನಿವಾರ್ಯ. ಇಂಥ ಪತ್ರಿಕೆಗೆ ಕೋಟಿ ಕೋಟಿ ನಮಸ್ಕಾರಗಳು.

-ಟಿ. ವಿ. ಬಿ. ರಾಜನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.