ADVERTISEMENT

ಪ್ರಜಾವಾಣಿ@75: ನೈಜತೆಯ ಪತ್ರಿಕೆ ಪ್ರಜಾವಾಣಿ -ಬಿ.ಆರ್. ಬಸವರಾಜ್

ಪ್ರಜಾವಾಣಿ ವಿಶೇಷ
Published 20 ನವೆಂಬರ್ 2022, 11:24 IST
Last Updated 20 ನವೆಂಬರ್ 2022, 11:24 IST
   

ಮಕ್ಕಳಿಗೆ ಮೊಬೈಲ್ ತೋರಿಸಿ ಊಟಮಾಡಸದೇ ಪ್ರಜಾವಾಣಿಯಲ್ಲಿ ಬರುವ ಚಿತ್ರಗಳು ಒಳ್ಳೆಯ ಸುದ್ದಿಗಳ ಬಗ್ಗೆ ತೋರಿಸಿ ಊಟಮಾಡಿಸಿ,

ಪ್ರಜಾವಾಣಿ ದಿನ ಪತ್ರಿಕೆ 75 ವರ್ಷಗಳು ಸಂದ ಈ ಸುಸಂದರ್ಭದ ಅಮೃತಮಹೋತ್ಸವ ಆಚರಿಸುತ್ತಿರುವುದಕ್ಕೆ ಶುಭಾಶಯಗಳನ್ನು ಹೇಳುತ್ತೇನೆ. ನಾನು ನಮ್ಮ ಮನೆಗೆ ಪ್ರಜಾವಾಣಿ ದಿನಪತ್ರಿಕೆಯನ್ನು ತರಿಸಿಕೊಳ್ಳುತ್ತೇನೆ. ಪತ್ರಿಕೆ ಕೈಯಲ್ಲಿ ಹಿಡಿದು ಓದುವಾಗಲೇ ಏನೋ ಒಂದು ಖುಷಿ ಇರುತ್ತದೆ. ಬೇರೆ ಪತ್ರಿಕೆಗಳಿಗೆ ಹೋಲಿಸಿದರೆ ಪ್ರಜಾವಾಣಿ ಪತ್ರಿಕೆಯ ನೈಜತೆ ತುಂಬಾ ಚೆನ್ನಾಗಿ ಇರುತ್ತದೆ. ಯಾವುದೇ ಒಂದು ಪಕ್ಷದ ಪರ , ಧರ್ಮದಪರ ನಿಲ್ಲದೇ ಪಕ್ಷಾತೀತವಾಗಿ , ಎಲ್ಲಾ ಧರ್ಮದವರು ಇಷ್ಟಪಟ್ಟು ಓದುವಂತ ದಿನಪತ್ರಿಕೆ ಪ್ರಜಾವಾಣಿ ಆಗಿರುತ್ತದೆ.

ಒಂದು ದಿನ ದಿನಪತ್ರಿಕೆ ಬಂದಿಲ್ಲದೇ ಹೋದರೆ ಆದಿನ ಪತ್ರಿಕೆಯನ್ನು ಓದಲು ಆಗದಿದ್ದರೆ ಇಡೀ ದಿನ ಏನೋ ಒಂದನ್ನು ಕಳೆದುಕೊಂಡಂತೆ ಅನಿಸುತ್ತದೆ. ಬೇರೆ ಪತ್ರಿಕೆಯವರು ಹಲವಾರು ಸಾರಿ ಬಂದು ನಮ್ಮ ಪತ್ರಿಕೆಯನ್ನು ತೆಗೆದುಕೊಳ್ಳಿ ಎಂದು ಒತ್ತಾಯಿಸಿಸುತ್ತಿದ್ದರೂ ನಾನು ಯಾರ ಒತ್ತಾಯಕ್ಕು ಮಣಿಯದೇ ನನಗೆ ಇಷ್ಟವಾದ, ಚಂದವಾದ , ಅಂದವಾದ ಬರಹಗಳುಳ್ಳ ಪ್ರಜಾವಾಣಿಯನ್ನು 1985 ರಿಂದ ನನ್ನ ಅಂಗಡಿ ವ್ಯಾಪಾರ ವ್ಯವಹಾರ ಶುರುಮಾಡಿದಾಗಿನಿಂದಲೂ ಅದೇ ಪತ್ರಿಕೆಯನ್ನು ತರಿಸಿ ಓದುತ್ತಿದ್ದೇನೆ. ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಹಾಗೆ ರವಿಗೂ ಕಾಣದ್ದನ್ನು ಪ್ರಜಾವಾಣಿ ಕಂಡು ಜನರಿಗೆ ತೋರಿಸುತ್ತಿದೆ ಎಂಬ ಭಾವನೆ ಉಂಟಾಗಿದೆ.

ತಾಯಂದಿರು ತಮ್ಮ ಮಕ್ಕಳಿಗೆ ಊಟಮಾಡಿಸುವಾಗ ಮಕ್ಕಳು ರಗಳೆಮಾಡಿದಾಗ ಮೊಬೈಲ್‍ಗಳನ್ನು ತೋರಿಸಿ ಅದೇ ಚಟಕ್ಕೆ ಒಳಗಾಗಿರುವ ಬಗ್ಗೆ ತಮ್ಮ ಪತ್ರಿಕೆಯಲ್ಲಿಯೇ ಓದಿರುತ್ತೇನೆ. ಇನ್ನು ಮುಂದೆ ತಾಯಂದಿರು ಮಕ್ಕಳಿಗೆ ಮೊಬೈಲ್ ಅನ್ನು ತೋರಿಸದೇ ಪ್ರಜಾವಾಣಿ ದಿನಪತ್ರಿಕೆಯಲ್ಲಿರುವ ಇರುವ ಒಳ್ಳೆಯ ಚಿತ್ರಗಳನ್ನು . ಬಂದಿರುವ ಒಳ್ಳೆಯ ಸುದ್ದಿಗಳ ಬಗ್ಗೆ ತೋರಿಸಿ ಹೇಳಿ ಊಟಮಾಡಿಸಲು ಪ್ರಯತ್ನಿಸಿ

-ಬಿ.ಆರ್. ಬಸವರಾಜ್, ರೇಣುಕ ಜರಾಕ್ಸ್ ಆಲ್ದೂರು, 577111

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT