ರೈತರ ಜಾನುವಾರುಗಳಿಗೆ ಮನೆಗೇ ಬಂದು ಚಿಕಿತ್ಸೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಸಂಚಾರಿ ಪಶು ಚಿಕಿತ್ಸಾ ವಾಹನವನ್ನು ರಾಜ್ಯದಲ್ಲಿ ಆರಂಭಿಸಿರುವುದು ಉತ್ತಮ ಬೆಳವಣಿಗೆ. ಪಶುಸಂಗೋಪನಾ ಇಲಾಖೆಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಜಾನುವಾರುಗಳ ಮಾಲೀಕರು ತಮ್ಮ ಪಶುಗಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಬಹುದಾಗಿದೆ. ಈ ಪಶುಚಿಕಿತ್ಸಾ ಆಂಬುಲೆನ್ಸ್ ಸೇವೆಯಿಂದ ಅನಾರೋಗ್ಯಪೀಡಿತ ಹಲವಾರು ಜಾನುವಾರುಗಳನ್ನು ರಕ್ಷಿಸಬಹುದಾಗಿದೆ. ಸಂವೇದನಾಶೀಲವಾಗಿರುವ ಈ ಸೇವೆಯನ್ನು ಬೀದಿ ನಾಯಿಗಳು ಮತ್ತು ಮಂಗಗಳಿಗೂ ಅನ್ವಯಿಸುವಂತಾದರೆ ಒಳ್ಳೆಯದು.
ರಾಸುಮ ಭಟ್,ಚಿಕ್ಕಮಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.