ಜಿಲ್ಲಾಧಿಕಾರಿಗೆ ಸಮಾನಾರ್ಥವಾಗಿ ಬಳಸುತ್ತಿರುವ ಡೆಪ್ಯುಟಿ ಕಮಿಷನರ್ ಎಂಬ ಪದವನ್ನು ಕಲೆಕ್ಟರ್ ಎಂದು ಮರುನಾಮಕರಣ ಮಾಡಲು ಚಿಂತನೆ ನಡೆಸಿರುವುದಾಗಿ ಕಂದಾಯ ಸಚಿವರು ಹೇಳಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಕಲೆಕ್ಟರ್ ಎಂಬ ಶಬ್ದವು ಬಳಕೆಯಲ್ಲಿ ಇರುವುದಾಗಿ ಅವರು ತಿಳಿಸಿದ್ದಾರೆ. ಆದರೆ ಈ ಪದವನ್ನು ಬ್ರಿಟಿಷರ ಕಾಲದಲ್ಲಿ ಬಳಸಲಾಗುತ್ತಿತ್ತು. ಕಂದಾಯ ವಸೂಲಿಗೆ ಜಿಲ್ಲೆಗೊಬ್ಬ ಬ್ರಿಟಿಷ್ ಅಧಿಕಾರಿಯನ್ನು ಮುಖ್ಯಸ್ಥನನ್ನಾಗಿ ನೇಮಕ ಮಾಡಲಾಗುತ್ತಿತ್ತು. ಅದಕ್ಕಾಗಿ ಈ ಅಧಿಕಾರಿಗಳಿಗೆ ‘ವಸೂಲಿಗಾರ’ ಎಂಬುದಕ್ಕೆ ಸಮಾನಾರ್ಥವಾಗಿ ಕಲೆಕ್ಟರ್ ಎಂಬ ಪದವನ್ನು ಬಳಸಲಾಗುತ್ತಿತ್ತು.
ಆದರೆ ಈ ಹೆಸರನ್ನು ಈಗ ಮರುನಾಮಕರಣ ಮಾಡಿದರೆ ಅದು ದಾಸ್ಯದ ಸಂಕೇತವಾಗಬಹುದು ಹಾಗೂ ಪ್ರಸ್ತುತ ಜಿಲ್ಲಾಧಿಕಾರಿಗಳು ವಸೂಲಿಗಾರರಾಗಿ ಉಳಿಯದೆ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕಲೆಕ್ಟರ್ ಎಂಬ ಶಬ್ದ ಬಳಸುವುದು ಎಷ್ಟು ಸರಿ ಎಂದು ಯೋಚಿಸಬೇಕಾಗಿದೆ.
- ರಂಗಸ್ವಾಮಿ ಎಂ.,ಸಿಂಧನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.