ADVERTISEMENT

ಸಾರ್ವಜನಿಕ ಸಾರಿಗೆಗೂ ಬೇಕು ಡಿಜಿಟಲ್‌ ಪೇ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 19:31 IST
Last Updated 13 ಸೆಪ್ಟೆಂಬರ್ 2021, 19:31 IST

ಕೋವಿಡ್‌ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದಿರುವುದರಿಂದ ನಿಧಾನವಾಗಿ ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಸಾಮಾನ್ಯ ಜನರು ತಮ್ಮ ತಮ್ಮ ಕೆಲಸಗಳಿಗೆ ಹೋಗಲು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸುವುದು ಸಹಜ. ಇಂತಹ ಸಂದರ್ಭಗಳಲ್ಲಿ ಬಸ್‌ನ ನಿರ್ವಾಹಕರಿಗೂ ಪ್ರಯಾಣಿಕರಿಗೂ ಚಿಲ್ಲರೆ ವಿಷಯದಲ್ಲಿ ಜಗಳಗಳು ಸರ್ವೇ ಸಾಮಾನ್ಯ. ಈ‌ ದಿಸೆಯಲ್ಲಿ ನಮ್ಮ ಸಾರಿಗೆ ಇಲಾಖೆಯವರು ಪ್ರಯಾಣಿಕರ ಅನುಕೂಲಕ್ಕಾಗಿ ಯಾಕೆ ಆನ್‌ಲೈನ್ ಪೇಮೆಂಟ್ ವ್ಯವಸ್ಥೆಯನ್ನು ಜಾರಿಗೆ ತರಬಾರದು? ನಗದು ವ್ಯವಹಾರವನ್ನು ಕಡಿಮೆ ಮಾಡಿ ಎಂದು ಸರ್ಕಾರವೇ ಹೇಳುತ್ತಾ ಬರುತ್ತಿದೆ. ‘ಡಿಜಿಟಲ್ ಇಂಡಿಯಾ’ಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ದಿಸೆಯಲ್ಲಿ, ಜನರ ಬದುಕಿನ ಅವಿಭಾಜ್ಯ ಅಂಗವಾಗಿರುವ ಸಾರ್ವಜನಿಕ ಸಾರಿಗೆಯಲ್ಲಿ ಡಿಜಿಟಲ್ ಪೇ ವ್ಯವಸ್ಥೆಯನ್ನು ಜಾರಿಗೆ ತರಲಿ. ಈ ಮೂಲಕ, ಅತಿ ಹೆಚ್ಚು ನಗದು ವ್ಯವಹಾರ ಮಾಡುವ ಸಾರ್ವಜನಿಕ ಸಾರಿಗೆಯಲ್ಲಿ ಸರ್ಕಾರದ ಆದಾಯ ಸೋರಿಕೆಯು ತಪ್ಪುತ್ತದೆ. ಸಾರ್ವಜನಿಕರು ಕೂಡ ಸಂತೋಷದಿಂದ ಪ್ರಯಾಣ ಮಾಡುತ್ತಾರೆ.

– ಹರವೆ ಸಂಗಣ್ಣ ಪ್ರಕಾಶ್, ಹರವೆ, ಚಾಮರಾಜನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT