‘ನೈತಿಕತೆಗೆ ಕಳಂಕ’ ಎಂಬ ಪತ್ರದಲ್ಲಿ ವಸುಧೇಂದ್ರ ಅವರು ಅನುವಾದಿತ ಪುಸ್ತಕಗಳ ಅನ್ಯಾಯದ ಒಂದು ಮುಖವನ್ನು ಪರಿಚಯಿಸಿದ್ದಾರೆ.
ಇದೆಲ್ಲ ಸರಿಯೇ. ಆದರೆ, ಇಲ್ಲಿ ಗಮನಿಸಬೇಕಾದ ಇನ್ನೂ ಒಂದು ಅಂಶವೆಂದರೆ, ನಮ್ಮ ಎಷ್ಟೋ ಜನ ಅನುವಾದಕರು ತಾವು ಅನುವಾದಿಸಲಿರುವ ಮೂಲ ಕೃತಿಯ ಭಾಷೆಯನ್ನು ಕಲಿತು, ಪರಿಣತಿ ಗಳಿಸಿ ಆ ಕೃತಿಯನ್ನು ಅನುವಾದಿಸುವುದಿಲ್ಲ. ಬದಲಾಗಿ ಒಂದು ಕೃತಿ ಇಂಗ್ಲಿಷ್‌ಗೆ ಅನುವಾದವಾಗಿದ್ದರೆ, ಇವರು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿ ಮೂಲ ಭಾಷೆಯನ್ನು ಹೆಸರಿಸಿಬಿಡುತ್ತಾರೆ. ಇದು ಭಾಷಾಂತರದಲ್ಲಿ ಆಗುತ್ತಿರುವ ಅನ್ಯಾಯದ ಮತ್ತೊಂದು ಮುಖ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.