ADVERTISEMENT

ವಾಚಕರ ವಾಣಿ | ಪುರ ಯೋಜನೆ ಅನುಷ್ಠಾನಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 19:30 IST
Last Updated 12 ಆಗಸ್ಟ್ 2020, 19:30 IST

ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪರಿಕಲ್ಪನೆಯಾದ ‘ಪುರ’ (PURA: Provision of Urban Amenities to Rural Areas) ಯೋಜನೆಯನ್ನು ಸಾಕಾರಗೊಳಿಸಲು ಇದು ಸಕಾಲ. ಕೋವಿಡ್-19 ಕಾರಣದಿಂದ ಲಕ್ಷಾಂತರ ಯುವಕರು ತಮ್ಮ ಉದ್ಯೋಗ ಬಿಟ್ಟು ಸ್ವಗ್ರಾಮಗಳಿಗೆ ತೆರಳಿದ್ದಾರೆ. ದುಡಿಯುವ ಹಂಬಲ, ಉತ್ಸಾಹ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಛಲ ಅವರಲ್ಲಿದೆ. ಆದರೆ ಅವರಿಗೆ ಅಗತ್ಯವಾದ ಮೂಲಸೌಕರ್ಯಗಳು ಗ್ರಾಮೀಣ ಪ್ರದೇಶದಲ್ಲಿ ದೊರೆಯುತ್ತಿಲ್ಲ. ಇದರಿಂದ ಪುನಃ ನಗರದ ಕಡೆಗೆ ಮುಖ ಮಾಡಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಅವರಿದ್ದಾರೆ.

ಕೋವಿಡ್‌ನಿಂದಾಗಿ ಯಾವ ವಲಯದಲ್ಲಿ ಏನೇನು ಪರಿಣಾಮಗಳಾಗಬಹುದು ಎಂಬುದನ್ನು ಯಾವ ತಜ್ಞರೂ ಊಹಿಸಲಾಗದು. ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ ಯುವಜನರ ಭವಿಷ್ಯ ಉತ್ತಮಪಡಿಸಬೇಕೆಂಬ ಇಚ್ಛಾಶಕ್ತಿ ಸರ್ಕಾರಗಳಿಗೆ ಇದ್ದರೆ, ಪುರ ಯೋಜನೆ ಸಾಕಾರಗೊಳ್ಳಲಿ. ಇದರಿಂದ ನಗರಗಳ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ.

-ಗಣಪತಿ ನಾಯ್ಕ, ಕಾನಗೋಡ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.