‘ಸಮಪಾಲು ಆಕೆಯ ಹಕ್ಕು; ಪುರುಷ ವ್ಯವಸ್ಥೆ ಅರಿಯಲಿ’ (ಪ್ರ.ವಾ., ಸಂಪಾದಕೀಯ, ಫೆ. 8).
ಈ ಬಗೆಗೆ ರವೀಂದ್ರನಾಥ ಟ್ಯಾಗೋರರ ಈ ಉಕ್ತಿಗಳು ಸುಮಾರು 100 ವರ್ಷಗಳ ಹಿಂದಿನವು–ಸ್ಮರಣೀಯ; ‘ಇತಿಹಾಸಪೂರ್ವ ಕಾಲದಲ್ಲಿ... ಡೈನೊಸಾರ್‌ಗಳಂಥ ಬೃಹದ್ದೇಹಿ... ದೈತ್ಯಜೀವಿಗಳಿಗೆ ಭಾರಿ ಕಾರ್ಯಗಳನ್ನೆಸಗಲು ಬೃಹತ್ತಾದ ಉಕ್ಕಿನಂಥ ಸ್ನಾಯುಗಳಿದ್ದರೂ ತಮಗಿಂತ ದುರ್ಬಲ ಪ್ರಾಣಿಗಳಿಗೆ ಅವು ತಮ್ಮ ಸ್ಥಳವನ್ನು ಬಿಟ್ಟುಕೊಡಬೇಕಾಯಿತು. ಹಾಗೆಯೇ ಮುಂಬರುವ ನಾಗರಿಕತೆಯಲ್ಲಿ, ಹೊರನೋಟಕ್ಕೆ ದುರ್ಬಲವಾಗಿ ಕಾಣುವ ಹಾಗೂ ಗಂಡಸೆಂಬ ಬೃಹತ್ ಮಾನವ ಪ್ರಾಣಿಯ ನೆರಳಿನಲ್ಲೇ ಬದುಕುತ್ತಾ ಹಿಂದುಳಿದಿರುವ ಸ್ತ್ರೀ ತನಗೆ ನ್ಯಾಯಯುತವಾಗಿ ಸಲ್ಲಬೇಕಾದ ಸೂಕ್ತ ಸ್ಥಾನವನ್ನು ಪಡೆಯಲಿದ್ದಾಳೆ. ಆಗ ಗಂಡಸರೆಂಬ ಈ ದೊಡ್ಡ ಮಾನವ ಪ್ರಾಣಿಗಳು ಆಕೆಗೆ ದಾರಿ ಬಿಟ್ಟು ಕೊಡಬೇಕಾಗುತ್ತದೆ, ಬಿಡಲೂಬಹುದು’. (ಅನು: ಜಿ. ರಾಮನಾಥ ಭಟ್).
ಟ್ಯಾಗೋರರ ಪ್ರವಾದಿವಾಣಿ ಈಗ ತಕ್ಕಮಟ್ಟಿಗಾದರೂ ದಿಟವಾಗುತ್ತಿಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.