ಸೂಕ್ತ ದರ ಲಭಿಸದ ಕಾರಣಕ್ಕೆ ಹಾಲು ಉತ್ಪಾದಕರು ಹಾಲನ್ನು ರಸ್ತೆಗೆ ಚೆಲ್ಲಿರುವುದು ಮತ್ತು ರೇಷ್ಮೆ ಬೆಳೆಗಾರರೊಬ್ಬರು ವಿಷ ಕುಡಿಯಲು ಮುಂದಾಗಿರುವುದು ವರದಿಯಾಗಿದೆ. ಈ ಘಟನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಣ್ತೆರೆಸಬೇಕಿದೆ.
‘ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಕೊಟ್ಟಿದ್ದೇವೆ’ ಎಂದು ಕೇಂದ್ರ ಸರ್ಕಾರ ಬೀಗುತ್ತಿದೆ. ‘ರೈತರ ಸಾಲ ಮನ್ನಾ ಮಾಡಿದ್ದೇವೆ’ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ ಈ ಕ್ರಮಗಳು ಅವೈಜ್ಞಾನಿಕವೆಂದು ಈ ಎರಡೂ ಘಟನೆಗಳು ಸಾರಿ ಹೇಳಿವೆ.
ರೈತರ ಬೆಳೆಗೆ ಉತ್ಪಾದನಾ ವೆಚ್ಚ ಕಳೆದು ಶೇಕಡ ಐವತ್ತರಷ್ಟು ಲಾಭ ಸಿಗುವಂತೆ ಬೆಲೆ ನಿಗದಿ ಮಾಡಬೇಕೆಂದು ಸರ್ಕಾರವೇ ನೇಮಿಸಿದ ಸ್ವಾಮಿನಾಥನ್ ಆಯೋಗ ಹೇಳಿದೆ. ಆದರೆ ಸರ್ಕಾರಗಳು ಆಯೋಗದ ವರದಿಯನ್ನು ಜಾರಿಗೊಳಿಸದೆ ‘ಅಮಾವಾಸ್ಯೆ ದಾನ’ ನೀಡಿದಂತೆ ಒಂದಿಷ್ಟು ಬೆಂಬಲ ಬೆಲೆ ಹೆಚ್ಚಿಸಿ ಕೈ ತೊಳೆದುಕೊಳ್ಳುತ್ತಿವೆ. ಇದು ನ್ಯಾಯವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.