ಕರ್ನಾಟಕದಲ್ಲಿ ಈಗಾಗಲೇ ಹೊಗೆಯಾಡುತ್ತಿರುವ ಕೋಮು ದ್ವೇಷಕ್ಕೆ ಮತ್ತಷ್ಟು ತುಪ್ಪ ಸುರಿದಂತೆ ‘ಇಸ್ಲಾಂ, ಕ್ರಿಶ್ಚಿಯನ್ ಧರ್ಮದವರಿಂದ ಅಪಾಯ ಎದುರಾಗಿದೆ’ ಎಂದು ಹರಿಹರಪುರದ ಶಾರದಾ ಲಕ್ಷ್ಮೀನರಸಿಂಹಪೀಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿರುವುದು (ಪ್ರ.ವಾ., ಮೇ 23) ಸರಿಯಲ್ಲ.
ಜಗತ್ತಿನಲ್ಲಿ ಭಾರತದ ಸಂಸ್ಕೃತಿ ಅತಿ ಪ್ರಾಚೀನವಾದುದು, ಆದರೆ ಅದನ್ನು ಒಪ್ಪಿಕೊಳ್ಳದಿರುವುದು ವಿದೇಶಿ ಸಂಸ್ಕೃತಿ ಎಂದು ಅವರು ಹೇಳಿದ್ದಾರೆ.ಹಿಂದೂ ಸಂಸ್ಕೃತಿ ಸದೃಢವಾಗಿದ್ದಲ್ಲಿ ಅನ್ಯ ಧರ್ಮದವರ ಬಾಹ್ಯ ಹಾಗೂ ಆಂತರಿಕ ದಾಳಿಗಳಿಗೆ ಹೆದರುವ ಅವಶ್ಯಕತೆಯಿಲ್ಲ. ಭಾರತವು ಸ್ವತಂತ್ರಗೊಂಡು 75 ವರ್ಷಗಳು ಸಂದರೂ ದೇಶದಲ್ಲಿ ಇಸ್ಲಾಂ ಮತ್ತು ಕ್ರೈಸ್ತ ಧರ್ಮದವರು ಇನ್ನೂ ಅಲ್ಪಸಂಖ್ಯಾತರೆ.
ಅವರಿಂದ ದೇಶಕ್ಕೆ ಅಪಾಯ ಎಂದು ಹೇಳಿರುವುದು ಸತ್ಯಕ್ಕೆ ದೂರವಾದುದು. ದೇಶದಲ್ಲಿ ಸರ್ವಧರ್ಮಗಳೂ ನೆಲೆಗೊಂಡಿವೆ. ಧರ್ಮ- ಧರ್ಮಗಳ ನಡುವೆ ಸೌಹಾರ್ದ ಮೂಡುವಂತಹ ಹೇಳಿಕೆಗಳು ಧರ್ಮನಿಷ್ಠರಿಂದ ಬರಬೇಕೇ ವಿನಾ ಅದನ್ನು ಕದಡುವಂತಹ ಹೇಳಿಕೆಗಳಲ್ಲ.
ಎಲ್.ಚಿನ್ನಪ್ಪ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.