ADVERTISEMENT

ವಾಚಕರ ವಾಣಿ: ಉತ್ತರಪತ್ರಿಕೆಯ ಹಾಳೆಗಳೇ ಬದಲು; ಕ್ರಿಮಿನಲ್‌ ಕೃತ್ಯ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 19:45 IST
Last Updated 18 ಆಗಸ್ಟ್ 2020, 19:45 IST

ಶ್ರೀರಂಗಪಟ್ಟಣ ತಾಲ್ಲೂಕಿನ ತರೀಪುರ ಗ್ರಾಮದ ಪ್ರೌಢಶಾಲಾ ವಿದ್ಯಾರ್ಥಿನಿ ಅಶ್ವಿನಿ ಅವರ ಎಸ್‌ಎಸ್‌ಎಲ್‌ಸಿ ಉತ್ತರಪತ್ರಿಕೆಯ ಹಾಳೆಗಳೇ ಬದಲಾಗಿರುವುದು ವಿಷಾದನೀಯ ಮಾತ್ರವಲ್ಲ, ಇದೊಂದು ಕ್ರಿಮಿನಲ್ ಕೃತ್ಯ. ಇವರ ಉತ್ತರಪತ್ರಿಕೆಯ ಹಾಳೆಗಳನ್ನು ತೆಗೆದು ಬೇರೆಯವರ ಉತ್ತರಪತ್ರಿಕೆಯ ಹಾಳೆಗಳನ್ನು ಸೇರಿಸಲಾಗಿದೆ ಎಂದರೆ ವ್ಯವಸ್ಥೆಯಲ್ಲಿ ದೋಷವಿದೆ ಎಂದೇ ಅರ್ಥ. ಎಸ್‌ಎಸ್‌ಎಲ್‌ಸಿ ಪರೀಕ್ಷಾ‌ ಮಂಡಳಿಯ ಯಾರದೋ ಕೈವಾಡ ಇದ್ದರಷ್ಟೇ ಇಂತಹ ಕೆಲಸ ಸಾಧ್ಯ. ಬರೀ‌ ಅಜಾಗರೂಕತೆಯಿಂದ ಇಂಥದ್ದು ಘಟಿಸಲು ಸಾಧ್ಯವಿಲ್ಲ.

ಶೈಕ್ಷಣಿಕ ವಲಯದಲ್ಲಿ ದುಷ್ಟಶಕ್ತಿಗಳ ಇರುವಿಕೆಯನ್ನು ಈ ಪ್ರಕರಣ ಎತ್ತಿ ತೋರಿಸುತ್ತಿದೆ. ಇದು, ಬೆಳೆಯುವ ಮಕ್ಕಳ ಭವಿಷ್ಯದ ವಿಷಯ. ವಿದ್ಯಾರ್ಥಿನಿಯ ತಪ್ಪೇ ಇಲ್ಲದ ಈ ಸಮಸ್ಯೆಗೆ ಕಾಲಮಿತಿಯಲ್ಲಿ ಸೂಕ್ತ ಪರಿಹಾರದೊರಕಿಸಿಕೊಡಬೇಕು.
-ಸುಶಾಂತ ಬನಾರಿ,ಮಾಡ್ನೂರು, ಪುತ್ತೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT