ADVERTISEMENT

ಕೋರ್ಟ್‌ ವರ ಕೊಟ್ಟರೂ...

ಆರ್‌.ಎಸ್‌.ಚಾಪಗಾವಿ
Published 28 ನವೆಂಬರ್ 2018, 20:23 IST
Last Updated 28 ನವೆಂಬರ್ 2018, 20:23 IST

‘ಮೊಲೆ ಮೂಡಿ ಬಂದಡೆ ಹೆಣ್ಣೆಂಬರು, ಮೀಸೆಕಾಸೆ ಬಂದಡೆ ಗಂಡೆಂಬರು, ಈ ಉಭಯದ ಜ್ಞಾನ ಹೆಣ್ಣೊ ಗಂಡೊ ನಾಸ್ತಿನಾಥ...’ (ಗೊಗ್ಗವ್ವೆ)

‘ಮೊಲೆ ಮೂಡಿ ಬಂದಡೆ ಹೆಣ್ಣೆಂಬರು, ಗಡ್ಡಮೀಸೆ ಬಂದಡೆ ಗಂಡೆಂಬರುನಡುವೆ ಸುಳಿವಾತ್ಮನು ಗಂಡೂ ಅಲ್ಲ ಹೆಣ್ಣೂ ಅಲ್ಲ ಕಾಣಾ ರಾಮನಾಥ’ (ದಾಸಿಮಯ್ಯ).

ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಸ್ತ್ರೀಯರ ಪ್ರವೇಶ ಕುರಿತು ದೇಶದ ಸುಪ್ರೀಂ ಕೋರ್ಟ್‌ ಸಕಾಲಿಕ ತೀರ್ಪು ನೀಡಿದೆ. ಆದರೆ ದೇವರು ವರ ಕೊಟ್ಟರೂ ಪೂಜಾರಿ ಅದನ್ನು ತಡೆ ಹಿಡಿದ ಎಂಬಂತೆ ಡಾಂಬಿಕ ವಿತಂಡವಾದಿಗಳು ಸ್ತ್ರೀಯರು ಮುಟ್ಟಾಗುವ ಕಾರಣ ನೀಡಿ ಪ್ರವೇಶ ಬೇಡವೆಂದು ಹುಯಿಲೆಬ್ಬಿಸುತ್ತಿದ್ದಾರೆ.

ADVERTISEMENT

‘ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ’ ಎಂದು ಬಸವಣ್ಣನವರು ಹೇಳಿದಂತೆ ಎಲ್ಲರೂ ಹುಟ್ಟುವುದು ಮುಟ್ಟಿನಿಂದಲೇ ಅಲ್ಲವೆ? ಮುಟ್ಟಿನಿಂದಲೇ ನಮ್ಮನ್ನು ಹಡೆದ ತಾಯಿಯನ್ನೇ ಬಹಿಷ್ಕೃತಗೊಳಿಸುವರೇ? ಇದಕ್ಕಿಂತ ಹೆಚ್ಚಿನ ಅನ್ಯಾಯ, ಪಾಪ ಇನ್ನೊಂದಿದೆಯೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.