ADVERTISEMENT

ವಾಚಕರ ವಾಣಿ: ಖಾಸಗಿ ಕನ್ನಡ ಶಾಲೆ ಉಳಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 28 ಅಕ್ಟೋಬರ್ 2022, 21:30 IST
Last Updated 28 ಅಕ್ಟೋಬರ್ 2022, 21:30 IST

ಕನ್ನಡ ಮಾಧ್ಯಮದಲ್ಲಿ ಬೋಧಿಸುತ್ತಿರುವ ಖಾಸಗಿ ಶಾಲೆಗಳ ಬಗ್ಗೆ ಸರ್ಕಾರವು ನಿರ್ಲಕ್ಷ್ಯ ಧೋರಣೆ ತಳೆಯುತ್ತಾ ಬಂದಿದೆ. ಈ ಬಗ್ಗೆ ನಡೆದ ಬಹಳಷ್ಟು ಹೋರಾಟಗಳ ಸಂದರ್ಭದಲ್ಲಿ ಬಂದು ಮನವಿ ಸ್ವೀಕರಿಸಿ, ಕಾಲಮಿತಿಯೊಳಗೆ ಬೇಡಿಕೆಗಳನ್ನು ಈಡೇರಿಸಿ ಕೊಡುವುದಾಗಿ ಭರವಸೆ ನೀಡಿದ ಸಂಬಂಧಿಸಿದ ಸಚಿವರು ಈಗ ಚಕಾರವೆತ್ತುತ್ತಿಲ್ಲ.

ಸರ್ಕಾರದ ಕೆಲವು ನಿರ್ಧಾರಗಳಿಂದ ಈ ಶಾಲೆಗಳು ತೀವ್ರ ಸಂಕಷ್ಟದ ಸ್ಥಿತಿಯಲ್ಲಿವೆ. ಭಾಷೆ, ನಾಡು, ನುಡಿಯ ಮೇಲಿನ ಅಭಿಮಾನದಿಂದ ಕನ್ನಡ ಮಾಧ್ಯಮ ಶಾಲೆಗಳನ್ನು ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಕೆಲವು ಖಾಸಗಿ ಸಂಸ್ಥೆಗಳು, ಮಠಗಳು ನಡೆಸಿಕೊಂಡು ಬರುತ್ತಿವೆ.

ಆದರೆ 1995ರ ನಂತರದ ಖಾಸಗಿ ಕನ್ನಡ ಶಾಲೆಗಳು ಈಗ ಮುಚ್ಚುವ ಹಂತಕ್ಕೆ ಬಂದಿವೆ. ಈಗ ಯಾವುದೇ ಸಂಸ್ಥೆಯವರು ಹೊಸದಾಗಿ ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿಲ್ಲ. ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಕಲ್ಪಿಸಲು ಸರ್ಕಾರವು2006ರವರೆಗೆ ಅನುವು ಮಾಡುತ್ತಿತ್ತು. ಆನಂತರ ಅದಕ್ಕೆ ಕತ್ತರಿ ಬಿತ್ತು. ಸರ್ಕಾರ ಈ ಹಿಂದಿನಂತೆ ಅನುದಾನ ಕೊಡಲು ಕ್ರಮ ಕೈಗೊಳ್ಳಬೇಕು.

-ವಿಜಯಕುಮಾರ್ ಎಚ್.ಕೆ.,ರಾಯಚೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.