ಮಠಾಧೀಶರಿಂದ ಜನತಂತ್ರಕ್ಕೆ ಮಾರಕ ಎಂದಿರುವ ಶಾಸಕ ಎಚ್. ವಿಶ್ವನಾಥ್ ‘ನನಗೆ ಅನ್ಯಾಯವಾದಾಗ ಸ್ವಾಮೀಜಿಗಳು ಎಲ್ಲಿ ಹೋಗಿದ್ದರು’ ಎಂದು ಪ್ರಶ್ನಿಸಿದ್ದಾರೆ (ಪ್ರ.ವಾ. ಜೂನ್ 30). ನಿಜ, ಯಾವ ಮಠದಿಂದಲೂ ಯಾವ ಜನಸಮುದಾಯವೂ ನ್ಯಾಯ ಪಡೆಯಲಾಗುವುದಿಲ್ಲ. ಬದಲಾಗಿ ಸಮಾಜದಲ್ಲಿ ಗುಲಾಮಿ ಮನೋಭಾವ ಮಾರಕವಾಗಿ ಬೆಳೆಯುತ್ತಿದೆ. ಕೆಲವು ಮಠಗಳಂತೂ ಮೂಢ ನಂಬಿಕೆಗಳ ಕಾರ್ಖಾನೆಯಂತೆಯೇ ವರ್ತಿಸುತ್ತಾ ಭಕ್ತರನ್ನು ಸುಲಿಯುತ್ತಿವೆ.
ನಮ್ಮ ಸಂವಿಧಾನ ಜಾತ್ಯತೀತ ಸಮಾಜ ನಿರ್ಮಿಸಬೇಕೆಂದು ಹೇಳುತ್ತಿದೆ. ಆದರೆ ಈ ದಿಸೆಯಲ್ಲಿ ಸರ್ಕಾರಗಳೇ ಕ್ರಿಯಾಶೀಲವಾಗಿಲ್ಲ. ಇದರ ಮಧ್ಯೆ ನೂರಾರು ಮಠಗಳುಹುಟ್ಟಿಕೊಳ್ಳುತ್ತಿವೆ.
ಅಂತಹ ಮಠಗಳೂ ಶುದ್ಧವಾದ ಆಧ್ಯಾತ್ಮಿಕ ಕೇಂದ್ರಗಳಾಗದೆ ವ್ಯಾಪಾರೋದ್ಯಮದಲ್ಲಿ ತೊಡಗಿಕೊಂಡ ವಾಣಿಜ್ಯ ಸಂಸ್ಥೆಗಳಾಗುತ್ತಿವೆ.
ಸರ್ಕಾರ ಕೂಡ ಮಠಗಳ ಸುಪರ್ದಿಯಲ್ಲಿ ನಡೆಯುವಂತಾಗಿದೆ. ಇದು ಆಗಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.