ADVERTISEMENT

ಮರುಪರೀಕ್ಷೆ ನಡೆಯಲಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2018, 19:35 IST
Last Updated 15 ಜುಲೈ 2018, 19:35 IST

ದಾವಣಗೆರೆ ವಿಶ್ವವಿದ್ಯಾಲಯವು ಜುಲೈ 13 ರಂದು ‘371ಜೆ’ ಮೀಸಲಾತಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗಾಗಿ ಪ್ರವೇಶ ಪರೀಕ್ಷೆ ನಡೆಸಿತ್ತು. ವಿವಿಧ ವಿಭಾಗಗಳ 10 ಹುದ್ದೆಗಳಿಗೆ 412 ಅಭ್ಯರ್ಥಿಗಳು ಪರೀಕ್ಷೆ
ಬರೆದಿದ್ದರು. ‘ಪರೀಕ್ಷೆಯಲ್ಲಿ OMR ಶೀಟ್ ಕೊಡಲಾಗು ವುದು’ ಎಂಬ ಸೂಚನೆ ಹಾಲ್ ಟಿಕೆಟ್‌ನಲ್ಲಿ ಇದ್ದರೂ, ಪರೀಕ್ಷೆಯಲ್ಲಿ OMR ಶೀಟ್ ಕೊಡದೆ, ಪ್ರಶ್ನೆಪತ್ರಿಕೆಯಲ್ಲಿಯೇ ಉತ್ತರಗಳನ್ನು ಗುರುತಿಸಲು ಹೇಳಿದ್ದರು. ಇದು ಅವೈಜ್ಞಾನಿಕ ಮತ್ತು ನಿಯಮಬಾಹಿರ ನಡೆ. ಈ ರೀತಿಯ ಪರೀಕ್ಷೆಯಿಂದ ಆಯ್ಕೆ ಮಾಡುವವರು ತಮಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಅವಕಾಶವಿದೆ.

ಉನ್ನತ ಶಿಕ್ಷಣ ಸಚಿವರು, ಪ್ರಾಧ್ಯಾಪಕರ ಆಯ್ಕೆಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಬನ್ ಪ್ರತಿಯನ್ನು ಒಳಗೊಂಡ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (OMR) ಶೀಟ್‌ನಲ್ಲೇ ಪರೀಕ್ಷೆ ನಡೆಸುವಂತೆ ಆದೇಶಿಸಬೇಕು. ಹಾಗೆಯೇ ಈಗಾ
ಗಲೆ ನಡೆದ ಪರೀಕ್ಷೆಯನ್ನು ರದ್ದುಪಡಿಸಿ ಪುನಃ ಪರೀಕ್ಷೆ ನಡೆಸಬೇಕು.

ಅರುಣ್ ಜೋಳದಕೂಡ್ಲಿಗಿ, ಎಚ್. ಮಲ್ಲಯ್ಯ, ಗಂಗಮ್ಮ, ಮಹಾಂತೇಶ್., ಕನ್ನಡ ವಿ.ವಿ., ಹಂಪಿ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.