ದುರಂತ ನಾಯಕನೆಂದು ಹೆಸರಾಗಿದ್ದ ಬಾಲಿವುಡ್ ನಟ ದಿಲೀಪ್ ಕುಮಾರ್ ಅವರ ಮನೋಜ್ಞ ಅಭಿನಯಕ್ಕೆ ಮಾರು ಹೋಗದವರಿಲ್ಲ. 1950-80ರ ಅವಧಿಯಲ್ಲಿ ಸೂಪರ್ ಸ್ಟಾರ್ ಆಗಿದ್ದ ಅವರ ಹಿನ್ನೆಲೆಯನ್ನು ಗಮನಿಸಿದರೆ, ಅವರ ಸಾಧನೆಯ ಮಹತ್ವ ತಿಳಿಯುತ್ತದೆ. ಹಣ್ಣು ಮಾರುತ್ತಿದ್ದ ಒಬ್ಬ ವ್ಯಕ್ತಿ ಮುಂದೆ ಭಾರತದ ಸಿನಿಮಾರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದ ಮತ್ತು ತನ್ನದೇ ವಿಶಿಷ್ಟ ಛಾಪು ಮೂಡಿಸಿದ ಸಾಧನೆಯು ಸಾಮಾನ್ಯ ಜನರಿಗೆ ಪ್ರೇರಣೆ ಆಗುವಂಥದ್ದು. ಕಷ್ಟಪಟ್ಟರೆ ಏನನ್ನಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟ ಮಹಾನ್ ಚೇತನ ದಿಲೀಪ್ ಕುಮಾರ್.
ಈ ಮೇರುನಟ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ‘ಮೊಘಲ್-ಎ-ಆಜಂ’, ‘ದೇವದಾಸ್’ನಂತಹ ಸಿನಿಮಾಗಳಲ್ಲಿನ ಅವರ ನಟನೆ, ಯುವ ನಟರಿಗೆ ಶಾಶ್ವತವಾದ ಪ್ರೇರಣೆಯೇ ಸರಿ.
–ರಾಸುಮ ಭಟ್, ಚಿಕ್ಕಮಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.