ADVERTISEMENT

ನವೀಕರಣ ಬೇಡ

​ಪ್ರಜಾವಾಣಿ ವಾರ್ತೆ
Published 9 ಜುಲೈ 2018, 19:56 IST
Last Updated 9 ಜುಲೈ 2018, 19:56 IST

ನಮ್ಮ ವಿಧಾನಸೌಧವು ರಾಜ್ಯದ ಹಿರಿಮೆ– ಗರಿಮೆಗಳನ್ನು ಹೆಚ್ಚಿಸುವ ನಿರ್ಮಾಣಗಳಲ್ಲಿ ಒಂದು. ಅದರ ನಿರ್ವಹಣೆ ಸರ್ಕಾರದ ಜವಾಬ್ದಾರಿ. ಆದರೆ ಇತ್ತೀಚಿನ ಬೆಳವಣಿಗೆಗಳು ಜನರಲ್ಲಿ ಆತಂಕ ಮೂಡಿಸುತ್ತಿವೆ. ಐದು ವರ್ಷದ ಅವಧಿಗೆ ಆಯ್ಕೆಯಾದ ಶಾಸಕರು ಸಚಿವರಾಗಿ ಜನರ ತೆರಿಗೆಯ ಹಣವನ್ನು ಮನಸೋ ಇಚ್ಛೆ ಬಳಸಿಕೊಂಡು ತಮಗೆ ನೀಡುವ ಕೊಠಡಿಗಳ ನವೀಕರಣ ಮಾಡಿಸುವುದು ಅಗತ್ಯವೇ? ಇದರಿಂದ ಹಣ ಪೋಲಾಗುವುದಲ್ಲದೆ ಕಟ್ಟಡಕ್ಕೂ ಹಾನಿಯಾಗುತ್ತದೆ.

ಅನಿವಾರ್ಯ ಸಂದರ್ಭಗಳನ್ನು ಬಿಟ್ಟು ವಿಧಾನಸೌಧದಲ್ಲಿ ಯಾವುದೇ ನವೀಕರಣ ಕೆಲಸಕ್ಕೆ ಅನುಮತಿ ನೀಡಬಾರದು. ಆ ಬಗ್ಗೆ ಸರ್ಕಾರ ಕಠಿಣ ಕಾನೂನು ರೂಪಿಸಬೇಕು ಹಾಗೂ ಕಟ್ಟಡವನ್ನು ಈಗಿರುವ ಸ್ವರೂಪದಲ್ಲೇ ಕಾಪಾಡಿಕೊಂಡು ಹೋಗಲು ವ್ಯವಸ್ಥೆ ಮಾಡಬೇಕು.

ಜನಪ್ರತಿನಿಧಿಗಳು ತಮ್ಮ ಸ್ವಂತ ವಾಸದ ಮನೆ, ಬಂಗಲೆಗಳಲ್ಲಿ ತಮ್ಮಿಚ್ಛೆಯಂತೆ ನವೀಕರಣಗಳನ್ನು ಮಾಡಿಕೊಳ್ಳಲಿ. ಆದರೆ ವಿಧಾನಸೌಧದಲ್ಲಿ ಬದಲಾವಣೆ ಸಲ್ಲದು.

ADVERTISEMENT

-ಚಂದ್ರಶೇಖರ ಪುಟ್ಟಪ್ಪ, ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.