ADVERTISEMENT

ಹೋಗದಿರುವುದೇ ಲೇಸು

ವಿಶಾಲಾಕ್ಷಿ ಶರ್ಮಾ
Published 24 ಅಕ್ಟೋಬರ್ 2018, 20:00 IST
Last Updated 24 ಅಕ್ಟೋಬರ್ 2018, 20:00 IST
ಅಕ್ಟೋಬರ್ 23ರಂದು ಪ್ರಕಟವಾದ ಅನುರಣನ ಅಂಕಣ
ಅಕ್ಟೋಬರ್ 23ರಂದು ಪ್ರಕಟವಾದ ಅನುರಣನ ಅಂಕಣ   

ಅನುರಣನ’ ಅಂಕಣದಲ್ಲಿ ನಾರಾಯಣ ಅವರು ಹೇಳಿರುವಂತೆ (ಪ್ರ.ವಾ., ಅ. 23) ಮಹಿಳೆಯರು ಶಬರಿಮಲೆ ಯಾತ್ರೆಯನ್ನೇ ಬಹಿಷ್ಕರಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಸೂಕ್ತ ಅಂತ ಅನ್ನಿಸುತ್ತದೆ. ಹತ್ತರಿಂದ ಐವತ್ತು ವರ್ಷ ವಯಸ್ಸಿನ ಮಹಿಳೆಯರು ಮಾತ್ರವಲ್ಲ, ಯಾವ ವಯಸ್ಸಿನ ಹೆಣ್ಣುಮಗಳೂ ಹೋಗಬಾರದು. ಗೌರವ ಇಲ್ಲದ ಜಾಗಕ್ಕೆ ಹೋಗದಿರುವುದೇ ಲೇಸು‌. ಇದುವೇ ಗಾಂಧಿಮಾರ್ಗ!

ಇಲ್ಲಿ ಇನ್ನೊಂದು ವಿಷಯವಿದೆ. ಇಂದಿನ ಆಹಾರ ಪದ್ಧತಿ, ಜೀವನಶೈಲಿ ಇನ್ನಿತರ ಕಾರಣಗಳಿಂದ ಎಷ್ಟೋ ಹೆಣ್ಣುಮಕ್ಕಳು ಎಂಟು- ಒಂಬತ್ತನೇ ವಯಸ್ಸಿಗೇ ಋತುಮತಿಯರಾಗುತ್ತಾರೆ. ಹಾಗೆಯೇ ಐವತ್ತು ವರ್ಷಕ್ಕೆ ಋತುಬಂಧವಾಗದ ಮಹಿಳೆಯರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅದೂ ಅಲ್ಲದೇ ತೀರಾ ಅಪರೂಪವಾಗಿ ಐವತ್ತರ ನಂತರ ಮಗುವನ್ನು ಹೆತ್ತವರೂ ಇದ್ದಾರೆ! ಇದೆಲ್ಲಾ ಶಬರಿಮಲೆಯ ದೇವಸ್ವ ಮಂಡಳಿ ಮತ್ತು ಅಯ್ಯಪ್ಪ ಭಕ್ತ ಗಣಗಳ ಗಮನಕ್ಕೆ ಬಂದಿಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.