ADVERTISEMENT

ಮರುಬಳಸಿ ಪರಿಸರ ಉಳಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ಮೇ 2020, 15:00 IST
Last Updated 24 ಮೇ 2020, 15:00 IST

ಮೊದಲೆಲ್ಲ ಮದ್ಯದ ಬಾಟಲಿಗಳ ಮರುಬಳಕೆ ಆಗುತ್ತಿತ್ತು. ಆದರೆ ಈಗ ಏಕೋ ಆ ರೀತಿ ಮರುಬಳಕೆ ಆಗುತ್ತಿಲ್ಲ ಎನಿಸುತ್ತದೆ. ಮರುಬಳಕೆ ಆಗುವಾಗ ನಮ್ಮ ಸುತ್ತಲಿನ ಪರಿಸರ ಸ್ವಲ್ಪವಾದರೂ ಸ್ವಚ್ಛವಾಗಿತ್ತು. ಈಗಂತೂ ಗಬ್ಬೆದ್ದು ಹೋಗಿದೆ. ಮೈದಾನಗಳಲ್ಲಿ, ಪಾರ್ಕುಗಳ ಮೂಲೆಯಲ್ಲಿ, ಜಲಪಾತಗಳ ಬುಡದಲ್ಲಿ, ಖಾಲಿ ಸೈಟುಗಳಲ್ಲಿ, ಅಷ್ಟೇ ಏಕೆ ಬೀದಿ ಬದಿಗಳಲ್ಲಿಯೂ ನಮಗೀಗ ಖಾಲಿ ಬಿಯರ್ ಹಾಗೂ ಮದ್ಯದ ಬಾಟಲಿಗಳು ಕಾಣಸಿಗುತ್ತವೆ. ಅಷ್ಟೇ ಅಲ್ಲದೆ ಕೆಲವರು ಮದ್ಯ ಸೇವಿಸಿದ ನಂತರ ಬಾಟಲಿಗಳನ್ನು ಅಲ್ಲಿಯೇ ಒಡೆದುಹಾಕುತ್ತಾರೆ. ಇದರಿಂದ ಪ್ರಕೃತಿ ಇನ್ನಷ್ಟು ಹಾಳಾಗುತ್ತದೆ. ವಿದ್ಯಾವಂತರು ಎನಿಸಿಕೊಂಡವರೇ ಈ ರೀತಿ ಮಾಡಿದರೆ ಅವರಿಗೆ ತಿಳಿ ಹೇಳುವವರಾರು?

ಇದನ್ನು ತಪ್ಪಿಸಲು ಸರ್ಕಾರ ಏನಾದರೂ ಕ್ರಮ ಕೈಗೊಳ್ಳಬೇಕು. ಪಾರ್ಸಲ್‌ ಕೊಡುವಾಗ ‘ಬಾಟಲ್ ಡಿಪಾಸಿಟ್’ ಎಂದು ಹೆಚ್ಚು ಹಣ ಪಡೆದು, ಬಾಟಲಿ ಮರಳಿಸಿದಾಗ ಆ ಹಣವನ್ನು ವಾಪಸ್ ಕೊಡುವ ವ್ಯವಸ್ಥೆ ಮಾಡಬಹುದು. ಎಲ್ಲೆಂದರಲ್ಲಿ ಕುಡಿದು ಬಾಟಲಿ ಎಸೆಯುವವರ ವಿರುದ್ಧ ಜನಜಾಗೃತಿ ಮೂಡಿಸಬೇಕು. ಸಂಗ್ರಹವಾದ ಬಾಟಲಿಗಳನ್ನು ಮದ್ಯ ತಯಾರಿಸುವ ಕಂಪನಿಗಳು ಮರುಬಳಕೆ ಮಾಡಬೇಕು. ಹೀಗಾದರೆ ಸ್ವಲ್ಪವಾದರೂ ನಮ್ಮ ಪರಿಸರ ಸ್ವಚ್ಛವಾಗಿ ಉಳಿದೀತು.

ವೆಂಕಟೇಶ ಬೈಲೂರು, ಕುಮಟಾ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.