ADVERTISEMENT

ಕಾಲವೇ ಉತ್ತರ

ವೆಂಕಟೇಶ ಮುದಗಲ್
Published 28 ಸೆಪ್ಟೆಂಬರ್ 2018, 19:48 IST
Last Updated 28 ಸೆಪ್ಟೆಂಬರ್ 2018, 19:48 IST

‘ವ್ಯಭಿಚಾರ ಅಪರಾಧವಲ್ಲ’ ಎನ್ನುವ ಮೂಲಕ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 497 ಅನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ರದ್ದು ಮಾಡಿದೆ. ಇನ್ನು ಮುಂದೆ ‘ಯಾವ ಹೂವು, ಯಾರ ಮುಡಿಗೆ...’ ಎಂಬ ಹಾಡನ್ನು ‘ಯಾರ ಹೂವು ಯಾರ ಮುಡಿಗೋ?’ ಎಂದು ಬದಲಿಸಬಹುದೇ?

ಹೆಂಡತಿ ಅಥವಾ ಗಂಡನ ಅಕ್ರಮ ಸಂಬಂಧದ ಕಾರಣಕ್ಕೆ ಕೊಲೆಗಳಾಗುತ್ತಿದ್ದುದನ್ನು ನಾವು ಓದಿದ್ದೇವೆ. ವಿವಾಹ ಬಂಧನ ಸಂಕೀರ್ಣವಾದದ್ದು. ಅದಕ್ಕೊಂದು ಶಿಸ್ತಿನ ಕಟ್ಟಳೆ ಇದೆ. ಐಪಿಸಿ ಸೆಕ್ಷನ್‌ 497 ರದ್ದಾದ ಪರಿಣಾಮ ಮದುವೆಯ ಪಾವಿತ್ರ್ಯಕ್ಕೆ ಧಕ್ಕೆ ಆಗುವುದೇ? ಕಾಲವೇ ಉತ್ತರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT