ADVERTISEMENT

ವಾಚಕರ ವಾಣಿ | ಪರಿಶಿಷ್ಟ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್: ತಡೆ ಸಲ್ಲದು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2022, 19:30 IST
Last Updated 11 ನವೆಂಬರ್ 2022, 19:30 IST

ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ಪರಿಶಿಷ್ಟ ಜಾತಿಯ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮೆರಿಟ್ ಸ್ಕಾಲರ್‌ಶಿಪ್ ದೊರೆಯುತ್ತಿತ್ತು. ಆದರೆ, ಈ ವಿದ್ಯಾರ್ಥಿಗಳು ಪದವಿ ತರಗತಿಯ ಪ್ರವೇಶ ಪಡೆದಿದ್ದರೂ ಇದುವರೆಗೆ ಈ ಸ್ಕಾಲರ್‌ಶಿಪ್ ದೊರೆತಿಲ್ಲ.

ಎರಡು ವರ್ಷಗಳಿಂದ ಈ ಸ್ಕಾಲರ್‌ಶಿಪ್ ಅನ್ನು ಕೆಲವರಿಗೆ ನೀಡಿದರೆ, ಮತ್ತೆ ಕೆಲವರಿಗೆ ತಡೆಹಿಡಿಯಲಾಗುತ್ತಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ಬಜೆಟ್ ಕೊರತೆಯ ನೆಪ ಹೇಳುತ್ತಿದ್ದಾರೆ. ಪತ್ರಿಕೆಗಳಲ್ಲಿ ದೊಡ್ಡ ಜಾಹೀರಾತುಗಳನ್ನು ನೀಡಿ, ಪರಿಶಿಷ್ಟ ವಿದ್ಯಾರ್ಥಿಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದೇವೆ ಎನ್ನುತ್ತದೆ ಸರ್ಕಾರ. ಆದರೆ ಮೆರಿಟ್ ಸ್ಕಾಲರ್‌ಶಿಪ್ ನೀಡಲು ಇರುವ ನಿಜವಾದ ಅಡೆತಡೆಗಳಾದರೂ ಏನು?

-ಡಾ. ಎ.ಆರ್.ಗೋವಿಂದಸ್ವಾಮಿ, ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.