ಮಾರ್ಚ್ 14, ಶಾಂತವೇರಿ ಗೋಪಾಲಗೌಡರ ಜನ್ಮ ದಿನ. ಭ್ರಷ್ಟ ವ್ಯವಸ್ಥೆಯಲ್ಲಿ ದೇಶ ನರಳುವಂತಹ ಸ್ಥಿತಿಗೆ ದೂಡಿದ ರಾಜಕೀಯ ವ್ಯವಸ್ಥೆಯ ಈ ಕಾಲದಲ್ಲಿ ಗೋಪಾಲ ಗೌಡರ ಮೇರು ವ್ಯಕ್ತಿತ್ವವನ್ನು ನೆನಪಿಸಿಕೊಳ್ಳುವುದು ಅಗತ್ಯ.ಸಾಗರ ತಾಲ್ಲೂಕಿನ ಮೊದಲ ಶಾಸಕ ಎನ್ನುವ ಹೆಮ್ಮೆ ಸಾಗರದವರಿಗೆ. ಐತಿಹಾಸಿಕ ಕಾಗೋಡು ಚಳವಳಿಗೆ ಸೈದ್ಧಾಂತಿಕ ನೆಲಗಟ್ಟು, ನಾಯಕತ್ವ ಕೊಟ್ಟವರು.
ವೀರೇಂದ್ರ ಪಾಟೀಲ್ ನೇತೃತ್ವದ ಸರ್ಕಾರವು ಗೋಪಾಲಗೌಡರಿಗೆ ಬೆಂಗಳೂರಿನಲ್ಲಿ ಉಚಿತವಾಗಿ ಉತ್ತಮ ನಿವೇಶನ ನೀಡಿದಾಗ, ‘ರಾಜ್ಯದ ಎಲ್ಲ ನಿವೇಶನ ರಹಿತರಿಗೆ ನಿವೇಶನ ನೀಡಿದ ನಂತರ ನನಗೆ ನೀಡಿ’ ಎಂದು ಹೇಳಿ, ಈ ಕೊಡುಗೆಯನ್ನು ನಯವಾಗಿ ತಿರಸ್ಕರಿ ಸಿದ್ದು ಇತಿಹಾಸ. ಇತ್ತೀಚೆಗೆ ಒಬ್ಬ ಶಾಸಕರು ತನಗೆ ನಿವೇಶನ ಕೊಡಲು ಸರ್ಕಾರವನ್ನು ಒತ್ತಾಯಿಸಿ ಧರಣಿ ಕೂರುವ ಬೆದರಿಕೆ ಹಾಕಿದ್ದರು. ಗೋಪಾಲಗೌಡರ ಪ್ರಾಮಾಣಿಕತೆ, ಜನಪರ ಕಾಳಜಿ, ಸೈದ್ಧಾಂತಿಕ ಬದ್ಧತೆ ಈಗ ಯಾರಲ್ಲೂ ಕಾಣುತ್ತಿಲ್ಲ. ಅನೇಕ ಶಾಸಕರು, ಮಂತ್ರಿ, ಮುಖ್ಯಮಂತ್ರಿಗಳು ಜನಮನದಿಂದ ಮರೆಯಾಗಿದ್ದಾರೆ. ಗೋಪಾಲಗೌಡರು ಜೀವಂತವಾಗಿದ್ದಾರೆ.
-ಬಿ.ಆರ್.ಜಯಂತ್,ಸಾಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.