ADVERTISEMENT

ಸಿದ್ಧರಾಮ ಸ್ವಾಮೀಜಿ ಉತ್ತರಾಧಿಕಾರಿ: ಸಕಾಲಿಕ ಮತ್ತು ಸ್ತುತ್ಯ!

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 20:00 IST
Last Updated 21 ಅಕ್ಟೋಬರ್ 2018, 20:00 IST

ಕ್ರಿಯಾಶೀಲರೂ ಬಸವ ಸಿದ್ಧಾಂತದ ಪ್ರಬುದ್ಧ ಹಾಗೂ ಸಮರ್ಪಿತ ಅನುಭವಿ ಚೇತನರೂ ಆದ ಬೆಳಗಾವಿ ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿಯನ್ನು ಗದಗಿನ ತೋಂಟದಾರ್ಯ ಮಠಕ್ಕೆ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿರುವುದು ಸೂಕ್ತ ಹಾಗೂ ಸಕಾಲಿಕ ನಿರ್ಣಯ! ಗದಗಿನ ಲಿಂಗೈಕ್ಯ ಶ್ರೀಗಳೊಂದಿಗೆ ಶೈಕ್ಷಣಿಕ- ಧಾರ್ಮಿಕ- ಸಾಮಾಜಿಕ ಕಾರ್ಯಗಳಲ್ಲಿ ಹೆಗಲಿಗೆ ಹೆಗಲು ಕೊಟ್ಟು ದುಡಿದ ಬೆಳಗಾವಿಯ ಸಿದ್ಧರಾಮ ಸ್ವಾಮೀಜಿ ಗಡಿನಾಡ ಕನ್ನಡಕ್ಕೆ ಘನತೆ ತಂದುಕೊಟ್ಟವರು.

ಈಗ ಅವರು ಗಡಿನಾಡಿನಿಂದ ನಡುನಾಡಿನ ಗದಗಿನ ಶ್ರೀಮಠಕ್ಕೆ ಆಯ್ಕೆಯಾಗಿರುವುದು ಸಕಲ ವಿದ್ವಜ್ಜನರ ಸಮರ್ಥ ನಿರ್ಣಯ. ‘ಕನ್ನಡ ಜಗದ್ಗುರು’ಗಳಾಗಿ ಬೆಳೆದ-ಬೆಳಗಿದ ಲಿಂಗೈಕ್ಯ ಶ್ರೀಗಳ ಜೀವಧ್ವನಿಗೆ ಇವರು ಮುಂಚೂಣಿಯ ಮರುಧ್ವನಿ ತುಂಬುವುದು ನೂರಕ್ಕೆ ನೂರು ಸತ್ಯ!

–ಪ್ರೊ. ಜಿ.ಎಚ್. ಹನ್ನೆರಡುಮಠ, ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.