‘ಪ್ರಧಾನಿಗೆ ಪತ್ರ ಬರೆಯುವುದು ದೇಶದ್ರೋಹದ ಕೃತ್ಯವೇ?’ ಎಂದು ಪ್ರಶ್ನಿಸಿರುವ ಸಂಪಾದಕೀಯ (ಪ್ರ.ವಾ., ಅ. 10) ಅತ್ಯುತ್ತಮ ವಿಮರ್ಶೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಪ್ರಜೆಯೂ ಆಳುವ ವರ್ಗವನ್ನು ಟೀಕಿಸುವ ಹಾಗೂ ಪ್ರಶ್ನಿಸುವ ಹಕ್ಕನ್ನು ಹೊಂದಿರುತ್ತಾನೆ. ಗುಂಪು ಹಲ್ಲೆಯ ಕುರಿತು ಕಳವಳ ವ್ಯಕ್ತಪಡಿಸಿ ಪ್ರಧಾನಿಗೆ ಪತ್ರ ಬರೆದದ್ದು ಗಣ್ಯರ ಸಾಮಾಜಿಕ ಕಳಕಳಿಯನ್ನು ಬಿಂಬಿಸುತ್ತದೆ.
ದೇಶದ್ರೋಹಕ್ಕೆ ಸಂಬಂಧಿಸಿದ ಐಪಿಸಿಯ 124 (ಎ) ಸೆಕ್ಷನ್ ಕುರಿತು ಸ್ಪಷ್ಟ ವ್ಯಾಖ್ಯಾನ ಮಾಡಬೇಕಾದ ಅಗತ್ಯವಿದೆ. ಭಾರತ ಬಹುಸಂಸ್ಕೃತಿಯ ದೇಶ. ಬಹುತ್ವವೇ ದೇಶದ ತಿರುಳು. ಯಾವುದೇ ರೀತಿಯ ಗುಂಪು ಹಲ್ಲೆಗಳನ್ನು ಸಹಿಸಲು ಸಾಧ್ಯವಿಲ್ಲ. ಭಿನ್ನ ದನಿಗಳನ್ನು ಹತ್ತಿಕ್ಕುವುದು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ತಕ್ಕುದಲ್ಲ. ಈ ಕುರಿತು ಪ್ರಧಾನಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೆ ಉತ್ತಮ.
-ನಿರಂಜನ್ ಮೂತಿ೯ ಆರ್.ಕೆ.,ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.