ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ಪ್ರಸಾದ ಸೇವಿಸಿ ಅಮಾಯಕರು ಬಲಿಯಾಗಿರುವುದು ಅಮಾನವೀಯ ಘಟನೆ. ತಿನ್ನುವ ಆಹಾರಕ್ಕೆ ವಿಷ ಬೆರೆಸಿ ಮುಗ್ಧರ ಜೀವವನ್ನು ತೆಗೆದವರು ಮನುಷ್ಯರಲ್ಲ ರಾಕ್ಷಸರು! ಮದುವೆ, ತಿಥಿ, ಜಾತ್ರೆ, ಉತ್ಸವ ಮುಂತಾದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕುಳಿತು ಊಟಮಾಡುವುದು ಸುರಕ್ಷಿತವೇ ಎಂಬ ಆತಂಕವನ್ನು ಈ ಘಟನೆ ಜನರಲ್ಲಿ ಮೂಡಿಸಿದೆ. ಕರ್ನಾಟಕದಲ್ಲಿ ಈ ರೀತಿಯ ಹೇಯ ಕೃತ್ಯ ಹಿಂದೆಂದೂ ನಡೆದಿರಲಿಲ್ಲ. ತಿನ್ನುವ ಅನ್ನಕ್ಕೆ ವಿಷ ಹಾಕಿ ಕೊಲ್ಲುವವರು ನಮ್ಮಲ್ಲಿದ್ದಾರಲ್ಲ ಎಂಬುದೇ ಬೇಸರದ ವಿಚಾರ!
ಕನ್ನಡಿಗರೆಂದರೆ ಕರುಣೆಯುಳ್ಳವರು, ಬೇರೆಯವರಿಗೆ ಆಶ್ರಯ ನೀಡುವವರು, ಉದಾರಿಗಳು, ಸಹನಾಸಂಪನ್ನರೆಂಬ ಮಾತುಗಳೆಲ್ಲ ನಿಜವೇ ಎಂಬ ಸಂದೇಹ ಮೂಡುವಂತಾಗಿದೆ.
–ಸಾ.ಮ. ಶಿವಮಲ್ಲಯ್ಯ, ಸಾಸಲಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.