ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿರುವ ಸುಮಲತಾ ಚಿತ್ರರಂಗದಲ್ಲಿ ಹೆಸರು ಮಾಡಿದವರು. ಅಂಬರೀಷ್ ಅವರ ಬಾಳಸಂಗಾತಿಯಾಗಿ ಪತಿಯ ಯಶೋಮಾರ್ಗದಲ್ಲಿ ದೀವಟಿಗೆಯಾದವರು. ಪತಿಯು ಅನಾರೋಗ್ಯಪೀಡಿತರಾಗಿದ್ದಾಗ ಮತ್ತು ಅಂತ್ಯಕ್ರಿಯೆ ಸಂದರ್ಭದಲ್ಲಿ ಅವರ ದಿಟ್ಟ ನಿಲುವುಗಳು ಪ್ರಶಂಸನೀಯವಾದವು.
ಬದಲಾದ ಪರಿಸ್ಥಿತಿಯಲ್ಲಿ, ಚುನಾವಣೆಯಲ್ಲಿ ಸ್ಪರ್ಧಿಸಬೇಕಾದಾಗ ಸುಮಲತಾ ಅವರ ತಾಳ್ಮೆಯ ನಡೆ ಆದರ್ಶವಾದುದು. ತಮ್ಮ ವಿರುದ್ಧ ಕೆಲವರು ನಾಲಿಗೆಯನ್ನು ಹರಿಯಬಿಟ್ಟಾಗಲೂ ಧೃತಿಗೆಡದೆ ಸಹನಶೀಲರಾಗಿ ವರ್ತಿಸಿದರು. ಪುರುಷ ಪ್ರಧಾನ ಸಮಾಜವು 21ನೇ ಶತಮಾನದಲ್ಲಿಯೂ ಸಮಾನತೆಯನ್ನು ಕೊಡಲು ಏನೆಲ್ಲ ಅಡೆತಡೆಯನ್ನೊಡ್ಡುತ್ತದೆ ಎಂಬುದಕ್ಕೆ ಅವರ ವಿರುದ್ಧ ವ್ಯಕ್ತವಾಗುತ್ತಿರುವ ಹತಾಶೆಯ ಮಾತುಗಳೇ ಸಾಕ್ಷಿ. ಪುರುಷ ರಾಜಕಾರಣಿಗಳು ಇನ್ನಾದರೂ ಸುಮಲತಾ ಅವರ ನಡೆಯನ್ನು ನೋಡಿ ಕಲಿಯಲಿ.
- ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.