ADVERTISEMENT

ಶಿಕ್ಷಕ ಪ್ರಶಸ್ತಿ: ಗೋಪ್ಯವಾಗಲಿ ಆಯ್ಕೆ ಪ್ರಕ್ರಿಯೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 31 ಆಗಸ್ಟ್ 2020, 19:45 IST
Last Updated 31 ಆಗಸ್ಟ್ 2020, 19:45 IST

ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಣ ಇಲಾಖೆಯು ಪ್ರಶಸ್ತಿಗಾಗಿ ಶಿಕ್ಷಕರಿಂದ ಅರ್ಜಿ ಆಹ್ವಾನಿಸುತ್ತದೆ. ಪ್ರಶಸ್ತಿ ನೀಡುವುದು ಗೌರವ ಸಮರ್ಪಿಸುವ ಒಂದು ಪವಿತ್ರವಾದ ಪದ್ಧತಿ. ಇದನ್ನು ಯಾರೂ ಒತ್ತಾಯಪೂರ್ವಕವಾಗಿಯಾಗಲೀ, ವಿನಂತಿಸಿಕೊಂಡಾಗಲೀ ಪಡೆಯುವಂತಾದರೆ ಆ ಪ್ರಶಸ್ತಿಗೆ ಬೆಲೆಯಿರುವುದಿಲ್ಲ. ಹೀಗಾಗಿ, ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಮಾಡಿದ ಸಾಧನೆಯನ್ನು ಇಲಾಖೆಯೇ ಗುರುತಿಸಿ ಆಯ್ಕೆ ಸಮಿತಿಗೆ ಶಿಫಾರಸು ಮಾಡಬೇಕು. ಪ್ರಶಸ್ತಿ ಘೋಷಣೆಯವರೆಗೆ ಆಯ್ಕೆ ಪ್ರಕ್ರಿಯೆ ಗೋಪ್ಯವಾಗಿರಬೇಕು. ಆಯ್ಕೆಗೆ ಪರಿಗಣಿಸಿದ ಮಾನದಂಡಗಳು ವಸ್ತುನಿಷ್ಠವಾಗಿರಬೇಕು.

ಇಲ್ಲವಾದರೆ ಸದಾ ಪ್ರಚಾರಕ್ಕಾಗಿ ಹಪಹಪಿಸುವ ಕೆಲವು ‘ಪ್ರಶಸ್ತಿ ರೋಗಿ’ಗಳಿಗೆ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. ಪ್ರಭಾವಿಗಳು ಹಾಗೂ ಅಧಿಕಾರಿಗಳಿಗೆ ದುಂಬಾಲು ಬಿದ್ದು ಪ್ರಶಸ್ತಿ ಗಿಟ್ಟಿಸಿಕೊಳ್ಳುವವರ ಗುಂಪು ಇತರ ಕ್ಷೇತ್ರಗಳಲ್ಲಿಯಂತೆ ಶಿಕ್ಷಕವರ್ಗದಲ್ಲೂ ಇದೆ. ಶಾಲೆ ಮತ್ತು ಮಕ್ಕಳ ಸರ್ವೋತೋಮುಖ ಬೆಳವಣಿಗೆಗೆ ಪ್ರಾಮಾಣಿಕತೆಯಿಂದ ದುಡಿಯುವ ಪ್ರತಿಯೊಬ್ಬ ಶಿಕ್ಷಕನೂ ಪ್ರಶಸ್ತಿಗೆ ಅರ್ಹ. ಒಬ್ಬ ಶಿಕ್ಷಕನಿಗೆ ಸಿಗುವ ನಿಜವಾದ ಪ್ರಶಸ್ತಿಯೆಂದರೆ ಮುಗ್ಧ ಮಕ್ಕಳ ಅಪರಿಮಿತ ಪ್ರೀತಿ, ಸಮಾಜ ಮತ್ತು ಪೋಷಕರ ಮೆಚ್ಚುಗೆ. ನಮ್ಮ ಕೆಲಸ ಪ್ರಾಮಾಣಿಕತೆಯಿಂದ ಕೂಡಿದ್ದರೆ ಪ್ರಶಸ್ತಿಗಳು ನಮ್ಮನ್ನು ಅರಸಿ ಬರುವುದರಲ್ಲಿ ಅನುಮಾನವಿಲ್ಲ.

ಮಧುಕುಮಾರ್ ಎನ್.ವಿ., ನಾಗೇನಹಳ್ಳಿ, ತರೀಕೆರೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.