ADVERTISEMENT

ವಾಚಕರ ವಾಣಿ: ದೋಷ ಪತ್ತೆಗೆ ಬೇಕಾಯ್ತು 18 ವರ್ಷ!

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 19:30 IST
Last Updated 7 ಜೂನ್ 2022, 19:30 IST

ಖ್ಯಾತ ಕಾರು ಉತ್ಪಾದಕ ಮರ್ಸಿಡಿಸ್ ಬೆಂಜ್ ಕಂಪನಿಯು, ಇದುವರೆಗೆ ಮಾರಾಟವಾಗಿರುವ ಬರೋಬ್ಬರಿ ಹತ್ತು ಲಕ್ಷ ಕಾರುಗಳನ್ನು ಬ್ರೇಕಿಂಗ್ ವ್ಯವಸ್ಥೆಯಲ್ಲಿನ ದೋಷದ ಕಾರಣ ಹಿಂದಕ್ಕೆ ಪಡೆದು, ಪರಿಶೀಲನೆಗೆ ಒಳಪಡಿಸಿದ ಬಳಿಕ ಅಗತ್ಯ ಬಿದ್ದರೆ ಬಿಡಿಭಾಗವನ್ನು ಬದಲಾಯಿಸಿ ಕೊಡುವುದಾಗಿ ತಿಳಿಸಿದೆ ಎಂದು ವರದಿಯಾಗಿದೆ (ಪ್ರ.ವಾ., ಜೂನ್‌ 6). ಕುಚೋದ್ಯದ ಸಂಗತಿಯೆಂದರೆ, ಈ ಕಾರುಗಳು 2004ರಿಂದ 2015ರ ಅವಧಿಯಲ್ಲಿ ತಯಾರಾಗಿವೆಯಂತೆ! ಇಷ್ಟು ವರ್ಷಗಳ ನಂತರ ಬ್ರೇಕಿಂಗ್ ವ್ಯವಸ್ಥೆಯಲ್ಲಿ ದೋಷ ಇರುವುದನ್ನು, ಆರಂಭಿಕ ಬೆಲೆಯು ಕನಿಷ್ಠ ₹ 25 ಲಕ್ಷ ಮೌಲ್ಯ ಹೊಂದಿರುವ ಕಂಪನಿಯ ಕಾರುಗಳ ತಯಾರಕರು ಗುರುತಿಸುತ್ತಾರೆ!

ಪಾಪ, ಹಾಗಾಗಿಯೇ ಪ್ರತಿಷ್ಠಿತರ ಬೆಂಜ್ ಕಾರುಗಳು ಹಲವೆಡೆ ಫುಟ್‍ಪಾತ್ ಮೇಲೇರಿ, ಪಾದಚಾರಿಗಳು, ಬಡ ಕೂಲಿಕಾರ್ಮಿಕರು ಪರಮಾತ್ಮನ ಪಾದ ಸೇರುವಂತೆ ಮಾಡಿವೆ. ನಾವು ದಡ್ಡರು, ಇಂತಹ ಬ್ರೇಕಿಂಗ್ ವ್ಯವಸ್ಥೆ ಅಳವಡಿಸಿರುವ ಕಂಪನಿಯ ವಿರುದ್ಧ ಕೇಸ್ ದಾಖಲಿಸುವುದನ್ನು ಬಿಟ್ಟು, ಖ್ಯಾತನಾಮರ ವಿರುದ್ಧ ಕೇಸ್ ದಾಖಲಿಸುತ್ತೇವೆ. ಬ್ರೇಕಿಂಗ್ ವ್ಯವಸ್ಥೆಯ ತಾಂತ್ರಿಕ ದೋಷ ಕಂಡು ಹಿಡಿಯಲು ಕಾರು ತಯಾರಕರಿಗೆ 18 ವರ್ಷ ಬೇಕಾದರೆ, ಸಾಕ್ಷ್ಯ, ಸನ್ನಿವೇಶ, ಕಾನೂನುಗಳೆಲ್ಲವನ್ನೂ ಸಾದ್ಯಂತವಾಗಿ ಪರಾಮರ್ಶಿಸಿ, ನ್ಯಾಯ ತೀರ್ಮಾನ ಮಾಡಲು 18-20 ವರ್ಷ ಬೇಕಾಗುವುದು ಸಹಜವಲ್ಲವೇ?!

-ಡಾ. ಚನ್ನು ಅ. ಹಿರೇಮಠ, ರಾಣೆಬೆನ್ನೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.